ತಾಯಿ-ಮಗಳ ಮೇಲೆ ಅತ್ಯಾಚಾರ

ತಾಯಿ-ಮಗಳ ಮೇಲೆ ಅತ್ಯಾಚಾರ

ನವದೆಹಲಿ : ಲೈಂಗಿಕ ದೌರ್ಜನ್ಯ ಪ್ರಕರಣಗಳು ಎಗ್ಗಿಲ್ಲದೇ ನಡೆಯುತ್ತಿವೆ. ಇಬ್ಬರು ಕುಡುಕರು ಬೀದಿಬದಿಯಲ್ಲಿ ಮಲಗಿದ್ದ ತಾಯಿ ಮತ್ತು ಮಗಳ ಮೇಲೆ ಅತ್ಯಾಚಾರ ಎಸಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಡಿ. 29 ಮತ್ತು 30ರ ಮಧ್ಯರಾತ್ರಿ ದೆಹಲಿಯ ರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಈ ವೇಳೆ ಸಂತ್ರಸ್ತೆಯರನ್ನು ಕಾಪಾಡುವ ಬದಲಿಗೆ ಸ್ಥಳೀಯರೊಬ್ಬರು ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

ಎಚ್ಚೆತ್ತುಕೊಂಡ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಸೆರೆಹಿಡಿಯಲು ಮುಂದಾಗಿದ್ದಾರೆ. ಪೊಲೀಸರ ಕಾರ್ಯಾಚರಣೆ ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ವಾಜಿಪುರದ ಅಮಿತ್ ಮತ್ತು ಜಹಂಗಿರ್‌ಪುರಿಯ ಸೋನು ಎಂದು ಗುರುತಿಸಲಾಗಿದೆ. ಇಷ್ಟೇ ಅಲ್ಲದೇ ಘಟನೆಯನ್ನು ವಿಡಿಯೋ ಮಾಡಿ ಹರಿಯಬಿಟ್ಟಿದ್ದ ವ್ಯಕ್ತಿಯನ್ನೂ ಸಹ ಹುಡುಕಿ ಬಂಧಿಸಲಾಗಿದೆ.

ಈ ವೇಳೆ ಎಚ್ಚರಗೊಂಡ ಸ್ಥಳೀಯರೊಬ್ಬರು ತಾಯಿ-ಮಗಳನ್ನು ದುಷ್ಟರಿಂದ ರಕ್ಷಿಸುವ ಬದಲಿಗೆ, ಆ ದೃಶ್ಯವನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

Related