ಗೆಳೆಯನ ತಾಯಿಯ ಮೇಲೆ ರೇಪ್

ಗೆಳೆಯನ ತಾಯಿಯ ಮೇಲೆ ರೇಪ್

ಸೆಕ್ಸ್ ಫಿಲಂ ನೋಡಿ ಗೆಳೆಯನ ತಾಯಿಯನ್ನ ಅತ್ಯಾಚಾರಗೈದಿರುವ ಭಯಾನಕ, ಅಮಾನವೀಯ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಶಹಜಹಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

21 ವರ್ಷದ ವಿಕಾಸ್ ಅಲಿಯಾಸ್ ನೇವಲಾ ಕಾಮುಕ ಯುವಕ. ಆನ್‌ಲೈನ್ ಸೆಕ್ಸ್ ಸಿನಿಮಾಗಳನ್ನು ನೋಡಿದ ವಿಕಾಸ್, ಮನೆಯಲ್ಲಿ ಒಂಟಿಯಾಗಿದ್ದ ಗೆಳೆಯನ 60 ವರ್ಷದ ವಿಧವೆ ತಾಯಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.

ಅತ್ಯಾಚಾರದ ಬಳಿಕ ಮಹಿಳೆಯ ಮೇಲೆ ಹಲ್ಲೆಗೈದಿರುವ ವಿಕಾಸ್, ವಿಷಯ ಯಾರಿಗೂ ತಿಳಿಸದಂತೆ ಜೀವ ಬೆದರಿಕೆ ಹಾಕಿದ್ದಾನೆ. ಕೊನೆಗೆ ಮಹಿಳೆಯನ್ನ ಮನೆಯಲ್ಲಿ ಬಂಧಿಸಿ ಎಸ್ಕೇಪ್ ಆಗಿದ್ದಾನೆ. ಮಹಿಳೆ ಸಹಾಯಕ್ಕೆ ಕೂಗುತ್ತಿರುವ ಧ್ವನಿ ಕೇಳಿದ ನೆರೆಹೊರೆಯವರು ಬಾಗಿಲು ತೆರೆದಿದ್ದಾರೆ. ಹಲ್ಲೆಗೊಳಗಾದ ಮಹಿಳೆಯನ್ನ ಬರ್ಡೋಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಭಾನುವಾರ ರಾತ್ರಿ ಸುಮಾರು 10.30ಕ್ಕೆ ಈ ಘಟನೆ ನಡೆದಿದ್ದು, ಆರೋಪಿಯನ್ನ ಬಂಧಿಸಲಾಗಿದೆ. ನಶೆಯಲ್ಲಿದ್ದ ವಿಕಾಸ್ ಗೆಳೆಯನ ತಾಯಿಯನ್ನ ಅತ್ಯಾಚಾರಗೈದು ಎಸ್ಕೇಪ್ ಆಗಿದ್ದನು. ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಎಂದು ಹಿರಿಯ ಪೊಲೀಸ್ ಅಧಿಕಾರಿ ಸುನಿಲ್ ಜಂಗಿಡ್ ಹೇಳಿದ್ದಾರೆ.

Related