ಸಚಿವ ವಿರುದ್ಧ ಅತ್ಯಾಚಾರ ಆರೋಪ

ಸಚಿವ ವಿರುದ್ಧ ಅತ್ಯಾಚಾರ ಆರೋಪ

ಮುಂಬೈ : ತಮ್ಮ ಮೇಲೆ ಬಂದಿರುವ ಅತ್ಯಾಚಾರ ಆರೋಪವನ್ನು ಮಹಾರಾಷ್ಟ್ರ ಸಾಮಾಜಿಕ ಮತ್ತು ನ್ಯಾಯ ಸಚಿವ ಧನಂಜಯ್ ಮುಂಡೆ ಅವರು ತಿರಸ್ಕರಿಸಿದ್ದಾರೆ.

ಧನಂಜಯ್ ಅವರು, ತಮ್ಮ ಮೇಲೆ ಆರೋಪ ಮಾಡುತ್ತಿರುವ ಮಹಿಳೆ ಹಾಗೂ ಅವರ ಸಹೋದರಿ ನನಗೆ ಬ್ಲ್ಯಾಕ್ ಮೇಲ್ ಮಾಡಲು ಯತ್ನಿಸುತ್ತಿದ್ದಾರೆ.

ಈ ಕುರಿತು 2020ರ ನವೆಂಬರ್ ತಿಂಗಳಿನಲ್ಲಿಯೇ ನಾನು ಪೊಲೀಸರಿಗೆ ದೂರನ್ನೂ ನೀಡಿದ್ದೆ ಎಂದು ಹೇಳಿದ್ದಾರೆ.

2003ರವರೆಗೂ ನಾನು ಮಹಿಳೆಯೊಂದಿಗೆ ಸಂಪರ್ಕದಲ್ಲಿದ್ದೆ, ಮನೆಯವರೂ ಕೂಡ ನಮ್ಮಿಬ್ಬರ ಸಂಬAಧ ಒಪ್ಪಿಕೊಂಡಿದ್ದರು ಎಂದು ಧನಂಜಯ್ ಮುಂಡೆಯವರು ಹೇಳಿದ್ದಾರೆ.

ಧನಂಜಯ್ ಅವರು ಸಂಬಂಧ  ಒಪ್ಪಿಕೊಳ್ಳುತ್ತಿದಂತೆಯೇ ಬಿಜೆಪಿ ಮಹಿಳಾ ಘಟಕದವರು ಸಿಎಂ ಉದ್ಧವ್ ಠಾಕ್ರೆಯವರಿಗೆ ಪತ್ರೆ ಬರೆದಿದ್ದು ಸಂಪುಟದಿAದ ಕೈಬಿಡುವಂತೆ ಆಗ್ರಹಿಸಿದ್ದಾರೆ.

ಮಹಿಳೆಯೊಬ್ಬರು ಧನಂಜಯ್ ಮುಂಡೆ ವಿರುದ್ಧ ಅತ್ಯಾಚಾರ ಆರೋಪ ಮಾಡಿ ಪೊಲೀಸ್ ಆಯುಕ್ತ ಪರಂ ಭೀರ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.

ಸಚಿವ ಧನುಂಜಯ ಮುಂಡೆ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು.

Related