ಐದು ಬಾರಿಯೂ ಗೆದ್ದ ರಾಮಣ್ಣ ಬಳ್ಳಾರಿ

ಐದು ಬಾರಿಯೂ ಗೆದ್ದ ರಾಮಣ್ಣ ಬಳ್ಳಾರಿ

ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮಪಂಚಾಯಿತಿಯಲ್ಲಿ ಈಗಾಗಲೇ ಸತತ ನಾಲ್ಕು ಬಾರಿ ಗೆದ್ದು ಪಂಚಾಯಿತಿ ಸದಸ್ಯರಾಗಿ ಉಪಾಧ್ಯಕ್ಷರಾಗಿದ್ದ ಬಳ್ಳಾರಿ ರಾಮಣ್ಣ 427 ಮತಗಳನ್ನು ಪಡೆದು ಐದನೇ ಬಾರಿಯೂ ಜಯದ ಪತಾಕೆ ಹಾರಿಸಿದ್ದಾರೆ.

ಮೂಲತಃ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾದ ಇವರು, ಮಾಜಿ ಸಚಿವರಾದ ಅನ್ಸಾರಿಯ ಬಲಗೈ ಎಂದೇ ಖ್ಯಾತಿ ಪಡೆದಿದ್ದಾರೆ. ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ರಾಮಣ್ಣನವರ ವಾರ್ಡಿನಲ್ಲಿ 9 ಜನ ಸ್ಪರ್ಧೆ ಮಾಡಿದ್ದರು. ಒಟ್ಟು 558 ಮತಗಳಲ್ಲಿ ರಾಮಣ್ಣ ಬಳ್ಳಾರಿ 427 ಮತಗಳನ್ನು ಪಡೆದರೆ, ತಮ್ಮ ಎದುರಾಳಿಗಳಲ್ಲಿ ಇಬ್ಬರು ಶೂನ್ಯ ಮತಗಳನ್ನು ಹೊಂದಿದ್ದು, ನಾಗೇಶ ಎಂಬುವರು ಕೇವಲ ಎರಡು ಮತಗಳನ್ನು ಪಡೆದುಕೊಂಡಿದ್ದಾರೆ. ಅಕ್ಬರ್ ಸಾಬ್ ಇವರು ತಕ್ಕಮಟ್ಟಿಗೆ ಪ್ರತಿರೋಧ ಒಡ್ಡಿದ್ದಾರೆ.

Related