ಗ್ಯಾರಂಟಿ ಭರವಸಿಗೆ ಗ್ಯಾರಂಟಿನೇ ಇಲ್ಲ: ಮಾಜಿ  ಸಿಎಂ ರಮಣ್ ಸಿಂಗ್

ಗ್ಯಾರಂಟಿ ಭರವಸಿಗೆ ಗ್ಯಾರಂಟಿನೇ ಇಲ್ಲ: ಮಾಜಿ  ಸಿಎಂ ರಮಣ್ ಸಿಂಗ್

ಬೊಮ್ಮನಹಳ್ಳಿ: ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಗ್ಯಾರಂಟಿ ಕಾರ್ಡ್ ಹಾಗೂ ಸುಳ್ಳು ಭರವಸೆಗಳನ್ನು ಈ ಹಿಂದೆಯೂ ಛತ್ತಿಸ್‌ಘಡ್‌ನಲ್ಲಿ ನೀಡಿ, ಅಧಿಕಾರಕ್ಕೆ ಬಂದರೂ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಛತ್ತಿಸ್‌ಘಡ್ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ನುಡಿದರು.

ಇಂದು ಬೊಮ್ಮನಹಳ್ಳಿಯ ಹೆಚ್.ಎಸ್.ಆರ್. ಬಡಾವಣೆಯಲ್ಲಿನ ನಾಡಪ್ರಭು ಕೆಂಪೇಗೌಡ, ಮಹಾಯೋಗಿ ವೇಮನ ಮತ್ತು ಬಿಪಿನ್ ರಾವತ್ ರವರ ಪುತ್ಥಳಿಗಳಿಗೆ ಛತ್ತಿಸ್‌ಘಡ್ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಸಂಸದ ತೇಜಸ್ವಿ ಸರ‍್ಯ ಹಾಗೂ ಶಾಸಕ ಎಂ. ಸತೀಶ್ ರೆಡ್ಡಿ ಮಾಲಾರ್ಪಣೆ ಮಾಡಿದರು. ಇದೇ ವೇಳೆ ಹೆಚ್.ಎಸ್.ಆರ್.ನ ಆಕ್ಸ್ಫರ್ಡ್ ಕಾಲೇಜಿನಲ್ಲಿ ಐಟಿ-ಬಿಟಿ ವಿದ್ಯಾರ್ಥಿಗಳೊಂದಿಗೆ ನೇರ ಸಂವಾದ ನಡೆಸಿ, ಸತತ 3 ಭಾರಿ ಛತ್ತಿಸ್‌ಘಡ್‌ನ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಅಭಿವೃದ್ದಿ ಸಾಧಿಸಿರುವ ಬಗ್ಗೆ ಹಾಗೂ ಅತೀ ಹೆಚ್ಚು ನಕ್ಸಲ್ ಸಮಸ್ಯೆಗಳನ್ನು ಬಗೆಹರಿಸಿರುವ ಬಗ್ಗೆ ಸವಿವರವಾಗಿ ತಿಳಿಸಿದರು.

ಇದೇ ವೇಳೆ ಮಾತನಾಡಿದ ಸತೀಶ್ ರೆಡ್ಡಿಯವರು ಈಗಾಗಲೇ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಗಳು ಜರುಗಿದ್ದು, ವಿದ್ಯಾವಂತರಾದ ತಾವುಗಳು ಮತದಾನದ ಬಗ್ಗೆ ಗಮನಹರಿಸಿ, ಮತ್ತೊಮ್ಮೆ ಬಿಜೆಪಿಗೆ ಅಧಿಕಾರ ನೀಡಬೇಕೆಂದು ಮನವಿ ಮಾಡಿದರು. ಬೆಂಗಳೂರಿನಲ್ಲಿ ಅತೀ ಹೆಚ್ಚಾಗಿರುವ ಟ್ರಾಫಿಕ್ ಸಮಸ್ಯೆಗಳನ್ನು ಬಗೆಹರಿಸಲು ಬೆಂಗಳೂರು ದಕ್ಷಿಣ ವಿಭಾಗಕ್ಕೆ 50 ಸಾವಿರ ಕೋಟಿಯನ್ನು ನೀಡಿ ಕನಕಪುರ, ಬನ್ನೇರುಘಟ್ಟ, ಹೊಸೂರು ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಶೀಘ್ರ ಪೂರ್ಣಗೊಂಡು ಕೇವಲ 3 ತಿಂಗಳ ಅವಧಿಯಲ್ಲಿ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಬೆಂ.ನ.ಜಿ. ಬಿಜೆಪಿ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮಿ ಆನಂದ್, ಮಾಜಿ ಬಿಬಿಎಂಪಿ ಸದಸ್ಯ ಗುರುಮೂರ್ತಿ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

 

Related