73ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್

73ನೇ ವಸಂತಕ್ಕೆ ಕಾಲಿಟ್ಟ ರಜನಿಕಾಂತ್

ಸೂಪರ್ ಸ್ಟಾರ್ ರಜನಿಕಾಂತ್ ಅವರು ಇಂದು (ಡಿಸೆಂಬರ್ 12) ರಂದು 73ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಜನಿಕಾಂತ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ರಜನಿಕಾಂತ್ ಅವರು ಮೂಲತಃ ಕರ್ನಾಟಕದ ಬೆಂಗಳೂರಿನವರಾಗಿದ್ದು, ಮೊದಲು ಅವರು ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇದಾದ ಬಳಿಕ ಸಿನಿಮಾ ಮಾಡುವ ಆಸಕ್ತಿ ಮೂಡಿತು. ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳನ್ನು ನಟಿಸಿ ಸಹಿ ಎನಿಸಿಕೊಂಡು ತೆಲುಗು, ತಮಿಳು, ಹಿಂದಿ, ಇನ್ನಿತರ ಭಾಷೆಗಳಲ್ಲಿ ನಟಿಸಿ ಬಹು ಭಾಷೆಯ ನಟರಾಗಿ ಮೆರೆದಿದ್ದಾರೆ.

1976ರಲ್ಲಿ ರಿಲೀಸ್ ಆದ ಕನ್ನಡದ ‘ಕಥಾ ಸಂಗಮ’ ಸಿನಿಮಾದಲ್ಲಿ ರಜನಿ ನಟಿಸಿದರು. ಪುಟ್ಟಣ್ಣ ಕಣಗಾಲ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ನಂತರ ಅವರು ಹಲವು ಸಿನಿಮಾಗಳಲ್ಲಿ ನಟಿಸಿದರು. ಕನ್ನಡದಲ್ಲಿ ‘ಬಾಳು ಜೇನು’, ‘ಒಂದು ಪ್ರೇಮದ ಕಥೆ’, ‘ಕುಂಕುಮ ರಕ್ಷೆ’, ‘ಗಲಾಟೆ ಸಂಸಾರ’, ‘ಕಿಲಾಡಿ ಕಿಟ್ಟು’, ‘ಮಾತು ತಪ್ಪದ ಮಗ’ ಮೊದಲಾದ ಕನ್ನಡ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ.

2010ರಲ್ಲಿ ಫೋರ್ಬ್ಸ್ ರಿಲೀಸ್ ಮಾಡಿದ ‘ಭಾರತದ ಪ್ರಭಾವಿ ವ್ಯಕ್ತಿಗಳು’ ಸಾಲಿನಲ್ಲಿ ರಜನಿಕಾಂತ್ ಹೆಸರು ಇತ್ತು. 2017ರಲ್ಲಿ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ಅವರು ಪಾರ್ಟಿ ಕೂಡ ಘೋಷಣೆ ಮಾಡುತ್ತಾರೆ ಎನ್ನಲಾಯಿತು. ಆದರೆ, ಅವರು ಈ ನಿರ್ಧಾರದಿಂದ ಹಿಂದೆ ಸರಿದರು.

 

Related