ಕೊಡಗು ಜಿಲ್ಲೆಯಲ್ಲಿ ಮಳೆಯಾರ್ಭಟ

  • In State
  • July 24, 2023
  • 112 Views
ಕೊಡಗು ಜಿಲ್ಲೆಯಲ್ಲಿ ಮಳೆಯಾರ್ಭಟ

ಮಡಿಕೇರಿ: ಕರ್ನಾಟಕದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಕೊಡಗು ಜಿಲ್ಲೆಯಾದ್ಯಂತ ಸತತವಾಗಿ ಮಳೆ ಸುರಿಯತ್ತಿದೆ. ನಾಪೋಕ್ಲು ಚೆರಿಯ ಪರಂಬು ಪ್ರದೇಶಗಳು ಜಲಾವೃತಗೊಂಡಿವೆ. ಚೆರಿಯ ಪೆರಂಬು ಗ್ರಾಮಕ್ಕೆ ಪ್ರವಾಸ ಬಂದಿದ್ದ ಕೆಲವರು ಭಾರೀ ಮಳೆಯಂದಾಗಿ ಅಲ್ಲೇ ಸಿಲುಕುವಂತಾಗಿತ್ತು. ರಸ್ತೆಗಳಲೆಲ್ಲ ಜಲಾವೃತಗೊಂಡ ಕಾರಣ ಅವರಿಗೆ ಸಾರಿಗೆ ಸಾಧನ ಇಲ್ಲವಾಗಿಬಿಟ್ಟಿತ್ತು. ಸ್ಥಳೀಯರು ತೆಪ್ಪಗಳ ಮೂಲಕ ಅವರನ್ನು ನಾಪೋಕ್ಲುಗೆ ತಂದು ಬಿಟ್ಟಿದ್ದಾರೆ. ಭಾಗಮಂಡಲ ಮತ್ತು ಜಿಲ್ಲಾ ಕೇಂದ್ರ ಮಡಿಕೇರಿ ನಡುವಿನ ರಸ್ತೆ ಸಹ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಮುಂಜಾಗ್ರತೆ ಕ್ರಮವಾಗಿ ಕೊಡಗು ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಿದೆ.

Related