ಮಳೆ ಹುಡುಗಿಯ ಕಲ್ಯಾಣ

ಮಳೆ ಹುಡುಗಿಯ ಕಲ್ಯಾಣ

ಬೆಂಗಳೂರು: ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಪೂಜಾ ಗಾಂಧಿ ಅವರಿಗೆ ಕಂಕನ ಭಾಗ್ಯ ಕೂಡಿ ಬಂದಿದ್ದು ನವೆಂಬರ್ 29ರಂದು ಅದ್ದೂರಿಯಾಗಿ ವಿವಾಹ ಮಾಡಿಕೊಂಡು ಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಸಪ್ತಪದಿ ತುಳಿದು ಏನು ಹೆಜ್ಜೆಗಳನ್ನು ಇಡಲು ಸಜ್ಜಾಗಿರುವ ನಟಿ ಪೂಜಾ ಗಾಂಧಿ ಅವರು ಉದ್ಯಮಿ ವಿಜಯ್ ಘೋರ್ಪಡೆ ಅವರ ಜೊತೆ ದಾಂಪತ್ಯ ಜೀವನ ನಡೆಸಲು ಮುಂದಾಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ರಂಗದಿಂದಲೂ ದೂರವಿರುವ ಪೂಜಾ, ಕನ್ನಡ ಕಲಿಕೆಯ ಕಾರಣದಿಂದಾಗಿ ಸಖತ್ ಸುದ್ದಿಯಾಗಿದ್ದರು. ಇದೀಗ ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಗೆ ಬಂದಿದ್ದಾರೆ.

ಮಳೆ ಹುಡುಗಿ ಎಂದೇ ಖ್ಯಾತಿಯ ಆಗಿರುವ ಪೂಜಾ ಗಾಂಧಿ ಇಂದು (ಬುದವಾರ ನ.29) ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಅವರ ಆಪ್ತರು ಹೇಳುವಂತೆ ಇಂದು ಉದ್ಯಮಿ ಜೊತೆ ಅವರು ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆ ಆಗುತ್ತಿದ್ದಾರೆ ಎನ್ನಲಾಗಿತ್ತು. ಅದೀಗ ಎಲ್ಲವೂ ನಿಜವಾಗಿದೆ. ಸ್ವತಃ ಪೂಜಾ ಗಾಂಧಿಯವರೆ ಮಾಧ್ಯಮಗಳಿಗೆ ತಮ್ಮ ಮದುವೆ ಕುರಿತಾಗಿ ಪತ್ರ ಬರೆದಿದ್ದಾರೆ

ಬೆಂಗಳೂರಿನ ಯಲಹಂಕದಲ್ಲಿ ಈ ಮದುವೆ ನಡೆಯುತ್ತಿದ್ದು, ವಿಜಯ್ ಘೋರ್ಪಡೆ ಎನ್ನುವವರ ಜೊತೆ ಪೂಜಾ ಹೊಸ ಬದುಕಿಗೆ ಕಾಲಿಡುತ್ತಿದ್ದಾರೆ. ವಿಜಯ್ ಬೆಂಗಳೂರಿನ ಲಾಜೆಸ್ಟಿಕ್ ಕಂಪನಿಯ ಮಾಲೀಕರು ಎಂದು ಹೇಳಲಾಗುತ್ತಿದೆ.

 

Related