ಹೊಸ ರೂಪದಲ್ಲಿ ಬದಲಾಗಲಿದೆ ರವೀಂದ್ರ ಕಲಾಕ್ಷೇತ್ರ

ಹೊಸ ರೂಪದಲ್ಲಿ ಬದಲಾಗಲಿದೆ ರವೀಂದ್ರ ಕಲಾಕ್ಷೇತ್ರ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ರವೀಂದ್ರ ಕಲಾಕ್ಷೇತ್ರಕ್ಕೆ ಹೊಸ ರೂಪರೇಷೆಯನ್ನು ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.

ಹೌದು, ರವೀಂದ್ರ ಕಲಾಕ್ಷೇತ್ರಕ್ಕೆ ಹೊಸ ರೂಪ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.‌ ರವೀಂದ್ರ ಕಲಾಕ್ಷೇತ್ರ ರಂಗಕಲಾವಿದರಿಗೆ ಮೀಸಲು ಇರುವ ಸಭಾಂಗಣ. ಇಲ್ಲಿ ಸಾವಿರಾರು ನಾಟಕಗಳು, ಪೌರಾಣಿಕ ನಾಟಕಗಳು, ಯಕ್ಷಗಾನ, ಭರತನಾಟ್ಯ, ಸರ್ಕಾರಿ ಕಾರ್ಯಕ್ರಮಗಳು ನಡೆದಿವೆ.‌ ಆದರೆ ಈ ಸಭಾಂಗಣದಲ್ಲಿ ರಂಗಕಲಾವಿದರಿಗೆ ಬೇಕಾದ ಯಾವುದೇ ಸೌಕರ್ಯಗಳು ಸರಿಯಾಗಿಲ್ಲ.‌

ಹಾಗಾಗಿ 24 ಕೋಟಿ ವೆಚ್ಚದಲ್ಲಿ ರವೀಂದ್ರ ಕಲಾಕ್ಷೇತ್ರವನ್ನ ಅಭಿವೃದ್ಧಿ ಪಡಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.

ಇನ್ನು, ರವೀಂದ್ರ ಕಲಾಕ್ಷೇತ್ರದಲ್ಲಿ ಹತ್ತಾರು ವರ್ಷಗಳಿಂದ ನಾಟಕಗಳನ್ನ ಪ್ರದರ್ಶನ ಮಾಡುತ್ತಾ ಬಂದಿದ್ದೀವಿ. ಆದರೆ ಈ ಕಲಾಕ್ಷೇತ್ರದಲ್ಲಿ ಸಾಕಷ್ಟು ಮೂಲಭೂತ ಸಮಸ್ಯೆಗಳಿವೆ.‌ ಇವುಗಳ ಮೇಲೆ ಬೆಳಕು ಚೆಲ್ಲುವ ಕೆಲಸಗಳು ಆಗಬೇಕಾಗಿದೆ.‌ ಶೌಚಾಲಯ, ವಿದ್ಯುತ್, ಸ್ಕ್ರೀನಿಂಗ್ ಸಮಸ್ಯೆಗಳು ತುಂಬ ಇದೆ.

Related