ಪಡ್ಡೆ ಹುಡುಗರ ಹೃದಯಕ್ಕೆ ಬೆಂಕಿ ಹಚ್ಚಿದ ಪುಟ್ಟಗೌರಿ..!

ಪಡ್ಡೆ ಹುಡುಗರ ಹೃದಯಕ್ಕೆ ಬೆಂಕಿ ಹಚ್ಚಿದ ಪುಟ್ಟಗೌರಿ..!

ಬೆಂಗಳೂರು: ನಟಿ ಸಾನ್ಯಾ ತನ್ನ ಚಿಕ್ಕವಯಸ್ಸಿನಲ್ಲಿ ಪುಟ್ಟಗೌರಿ ಸೀರಿಯಲ್ ನಲ್ಲಿ ಅಭಿನಯ ಮಾಡುವುದರ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದಳು.

ನಂತರ ಬಿಗ್ ಬಾಸ್ ಮನೆಗೆ ಬಂದ ಸಾನ್ಯಾ ಇನ್ನಷ್ಟು ಅಭಿಮಾನಿಗಳನ್ನು ಹೊಂದಿದರು. ಸದ್ಯ ಸಾನ್ಯಾ ಈಗ ಪುಟ್ಟಗೌರಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ. ಇನ್ನು ಪುಟ್ಟಗೌರಿ ಚಿತ್ರದಲ್ಲಿ ನಟನೆ ಮಾಡಿದ ನಂತರ ಸಾನ್ಯಾ ಫುಲ್ ಹಾಟ್ ಆಗಿ ಫೋಟೋಶೂಟ್ ಮಾಡಿಸುತ್ತಿದ್ದಾರೆ.

ಹೌದು, ಸದ್ಯ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಾತಾವರಣ ಫುಲ್ ಹಾಟ್ ಆಗಿದ್ದು, ವೆಕೇಷನ್ ಎಂಜಾಯ್ ಮಾಡಲು ನಟಿ ಸಾನ್ಯಾ ಕೊಡಗಿಗೆ ತೆರಳಿದ್ದಾರೆ. ಕೊಡಗಿನ ನಿಸರ್ಗದ ನಡುವೆ ಫುಲ್ ಎಂಜಾಯ್ ಮಾಡಿದ್ದಾರೆ. ಇನ್ಸ್ಟಾದಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸ್ಟೈಲಿಶ್ ಲುಕ್​ನಲ್ಲಿ ನಟಿ ಸಾನ್ಯಾ ಅಯ್ಯರ್ ಬೋಲ್ಡ್ ಆಗಿ ಮಿಂಚಿದ್ದು. ಶಾರ್ಟ್ ಸ್ಕರ್ಟ್​ ತೊಟ್ಟ ಸಾನ್ಯಾ, ಶರ್ಟ್ ಬಟನ್​ ತೆಗೆದು ಹಾಟ್​ ಆಗಿ ಪೋಸ್ ಕೊಟ್ಟಿದ್ದಾರೆ. ಸದ್ಯ ಪೋಟೋಸ್ ​ಪಡ್ಡೆ ಹುಡುಗರ ಹೈದಯಕ್ಕೆ ಬೆಂಕಿ ಇಟ್ಟಿದೆ.

ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಂತೆಯೇ ಸಾನ್ಯಾ  ಅಯ್ಯರ್ ಸಾಕಷ್ಟು ಬದಲಾಗುತ್ತಿದ್ದಾರೆ. ಈ​ ಸಿನಿಮಾದಲ್ಲಿ ಸಾನ್ಯಾ ಅಯ್ಯರ್​ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದು, ಇಂದ್ರಜಿತ್ ಲಂಕೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಈ ಹಿಂದೆ ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರಿಂದ ಸಾನ್ಯಾ ಅಯ್ಯರ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಆ ಫೋಟೋಗಳನ್ನು ಒಂದೊಂದೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸೀರಿಯಲ್ ಮೂಲಕ ಸಿನಿ ಜರ್ನಿ ಶುರು ಮಾಡಿದ ಸಾನ್ಯಾ, ಪುಟ್ಟಗೌರಿ ಪಾತ್ರ ಮಾಡಿ ಇಡೀ ಕರುನಾಡು ಮನಸ್ಸು ಗೆದ್ದಿದ್ದರು. ಪುಟ್ಟಗೌರಿಯಲ್ಲಿ ಅದ್ಭುತವಾಗಿ ನಟಿಸಿದ್ದನ್ನು ಇನ್ನೂ ಜನ ಮರೆತಿಲ್ಲ.

Related