ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪುಟಿನ್​​ಗೆ ಯುದ್ಧದ ಶಾಪ ತಟ್ಟಿಯೇ ಬಿಡ್ತಾ?

ಪುಟಿನ್ ಅತ್ಯಂತ ಕೆಟ್ಟ ಮಾನಸಿಕ ಮತ್ತು ದೈಹಿಕ ಸ್ಥತಿಯಲ್ಲಿದ್ದಾರೆ. ಕ್ಯಾನ್ಸರ್ ಸೇರಿದಂತೆ ಹಲವಾರು ಕಾಯಿಲೆಗಳಿಂದ ಏಕಕಾಲದಲ್ಲಿ ಬಳಲುತ್ತಿದ್ದಾರೆ ಎನ್ನಲಾಗ್ತಿದೆ.ಉಕ್ರೇನ್-ರಷ್ಯಾ ಯುದ್ಧ (Ukraine Russia war) ಮುಂದುವರೆದಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (President Vladimir Putin) ಅವರ ಆರೋಗ್ಯದ ಬಗ್ಗೆ ವದಂತಿಗಳು ಹೆಚ್ಚುತ್ತಲೇ ಇವೆ. ಪುಟಿನ್​​ ಕ್ಯಾನ್ಸರ್ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಉಕ್ರೇನ್ನ ಮಿಲಿಟರಿ ಗುಪ್ತಚರ ಮುಖ್ಯಸ್ಥರು ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಕೆಲವು ಪುಟಿನ್ ‘ಉಬ್ಬಿದ ತಲೆ’ ಹೊಂದಿರುವ ಇತ್ತೀಚಿನ ಫೋಟೋಗಳನ್ನು ತೋರಿಸಿದ್ದಾರೆ. ಅವರು ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.


ಪುಟಿನ್ ಅವರನ್ನು ಪದಚ್ಯುತಗೊಳಿಸಲು ದಂಗೆ ನಡೆಯುತ್ತಿದೆ ಎಂದು ತಿಳಿಸಿದ ಅವರು ನಾಯಕತ್ವದ ಬದಲಾವಣೆಯ ಬಗ್ಗೆಯೂ ಸುಳಿವು ನೀಡಿದ್ದರು. ನಡೆಯುತ್ತಿರುವ ಯುದ್ಧದಲ್ಲಿ ಒಂದು ಮಹತ್ವದ ತಿರುವು ಆಗಸ್ಟ್ ಮಧ್ಯದ ವೇಳೆಗೆ ಬರಲಿದೆ, ವರ್ಷದ ಅಂತ್ಯದ ವೇಳೆಗೆ ಯುದ್ಧವು ಕೊನೆಗೊಳ್ಳುತ್ತದೆ ಎಂದು ಭವಿಷ್ಯ ನುಡಿಸಿದ್ದಾರೆ. ವರದಿಗಳ ಪ್ರಕಾರ, ಮಾಜಿ ಕೆಜಿಬಿ ಅಧಿಕಾರಿ ಮತ್ತು ಪುಟಿನ್ ನಿಕಟ  ಸಹಾಯಕ, ನಿಕೊಲಾಯ್ ಪಟ್ರುಶೆವ್ ಈ ಸಮಯದಲ್ಲಿ ದೇಶ ಮತ್ತು ನಡೆಯುತ್ತಿರುವ ಉಕ್ರೇನ್ ಯುದ್ಧದ ನಿಯಂತ್ರಣವನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

Related