ಕರವೇ ಕಾರ್ಯಕರ್ತರ ಪ್ರತಿಭಟನೆ

ಕರವೇ ಕಾರ್ಯಕರ್ತರ ಪ್ರತಿಭಟನೆ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಪೀರನವಾಡಿ ಬಳಿ ಕ್ರಾಂತಿವೀರ ಸಂಗೋಳಿ ರಾಯಣ್ಣ ಅವರ ಮೂರ್ತಿ ಪ್ರತಿಷ್ಠಾನೆ ಮಾಡುವಂತೆ ಒತ್ತಾಯಿಸಿ ಕರವೇ ಕಾರ್ಯಕರ್ತರು ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಮಿನಿವಿಧಾನಸೌಧ ಎದರು ಪ್ರತಿಭಟನೆ ನಡೆಸಿ ನಡೆಸುವ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪೀರನವಾಡಿಯಲ್ಲಿ ಕ್ರಾಂತಿ ವೀರ ಸಂಗೋಳಿ ರಾಯಣ್ಣ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು.ಆದರೆ ಅದನ್ನು ಏಕಾ ಏಕಿ ಪೊಲಿಸರು ಬಂದು ತೆರವುಗೊಳಿಸಿ ರಾಷ್ಟ್ರ ಧ್ವಜ ಕೆಳಗೆ ಕೆಡವು ಮೂಲಕ ಅವಮಾನ ಮಾಡಿದ್ದಾರೆ.ಸಂಗೊಳಿ ರಾಯಣ್ಣ ಅವರ ಮೂರ್ತಿ ಪ್ರತಿಸ್ಠಾಪನೆ ಮಾಡಿದವರ ಮೇಲೆ ಪೊಲಿಸರು ಲಾಠಿ ಚಾರ್ಜ ಮಾಡಲಾಗಿದೆ.ಪೀರನವಾಡಿಯಲ್ಲಿ ಸಂಗೊಳಿ ರಾಯಣ್ಣ ಮೂರ್ತಿ ಸ್ಥಾಪನೆ ಮಾಡಲು ಅವಕಾಶ ನೀಡುವಂತೆ ಒತ್ತಾಯಿಸಿದರು.ಕರವೇ ತಾಲೂಕ ಅಧ್ಯಕ್ಷ ನಾಗೇಶ ಮಾಳಿ, ಎಚ್.ಎಸ್.ನಸಲಾಪುರೆ,ಸಿದ್ದು ರಾಹುಲ ಪೂಜಾರಿ ಮರ್ಯಾಯಿ,ಸಂಜು ಬಡಿಗೇರ,ಪ್ರತಾಪ ಪಾಟೀಲ, ಸಂಜು ಲಠ್ಠೆ,ಚನ್ನಪ್ಪಾ ಬಡಿಗೇರ,ಮಂಜುನಾಥ ಬಾನುಸೆ,ಕೃಷ್ಣಾ ದೇವಾನಗೋಳ,ರಾಜು ಪೂಜಾರಿ,ರಾಮಚಂದ್ರ ಧನಗರ ರಾಯಣ್ಣ ಅಭಿಮಾನಿಗಳು ಹಾಗೂ ಇನ್ನಿತರರು ಭಾಗವಹಿಸಿದ್ದರು.

Related