ನೇಹಾ ಸಾವಿಗೆ ನ್ಯಾಯ ಕೋರಿ ಮುಸ್ಲಿಂ ಸಮುದಾಯಗಳಿಂದ ಪ್ರತಿಭಟನೆ

ನೇಹಾ ಸಾವಿಗೆ ನ್ಯಾಯ ಕೋರಿ ಮುಸ್ಲಿಂ ಸಮುದಾಯಗಳಿಂದ ಪ್ರತಿಭಟನೆ

ಹುಬ್ಬಳ್ಳಿ: ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಅತ್ಯಯನ್ನು ಖಂಡಿಸಿ ಇಂದು ಹುಬ್ಬಳ್ಳಿ ನಗರದಾದ್ಯಂತ ಮುಸ್ಲಿಂ ಸಮುದಾಯದವರು ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.

ಕೊಲೆಗೀಡಾದ ಸ್ನೇಹ ಹಿರೇಮಠಕ್ಕೆ ನ್ಯಾಯ ಕೊಡಿಸಬೇಕೆಂದು ನೂರಾರು ಮುಸ್ಲಿಂ ವಿದ್ಯಾರ್ಥಿನಿಯರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ವೀ ವಾಂಟ್ ಜಸ್ಟೀಸ್ಎಂದು ಕೂಗುವ ಮೂಲಕ ಹೋರಾಟದಲ್ಲಿ ಭಾಗಿಯಾಗಿದ್ದರು.

ಇನ್ನು ಬಂದ್ ಗೆ ಪೂರಕವಾಗಿ ನಗರದ ಅಂಜುಮನ್ ಮತ್ತು ಇತರ ಮುಸ್ಲಿಂ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಅಲ್ಲಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಧಾರ್ಮಿಕ ಮುಖಂಡರು, ಮೌಲ್ವಿಗಳು ಹಾಗೂ ಮುಸ್ಲಿಂ ಸಮುದಾಯದ ಜನ ಪ್ರತಿಭಟನಾ ನಡೆಸಿದರು. ಸಾವಿರಾರು ವಿದ್ಯಾರ್ಥಿನಿಯರು, ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಗಲೇಬೇಕೆಂದು ಘೋಷಣೆ ಕೂಗಿದರು.

 

Related