ಪತ್ರಕರ್ತರ ಪ್ರತಿಭಟನೆ

ಪತ್ರಕರ್ತರ ಪ್ರತಿಭಟನೆ

ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ, ಸಂಸ್ಥಾಪಕ ರಾಜ್ಯಾಧ್ಯಕ್ಷ, ಬಂಗ್ಲೆ ಮಲ್ಲಿಕಾರ್ಜುನ ರವರ ನೇತ್ರತ್ವದಲ್ಲಿ ನೂರಾರು ಜನ ಪತ್ರಕರ್ತರು ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಪ್ರತಿಭಟನೆ ನಡೆಸಿದರು.

ವಾರಪತ್ರಿಕೆ, ಪಾಕ್ಷಿಕ ಪತ್ರಿಕೆ, ಮಾಸ ಪತ್ರಿಕೆ, ಹಾಗೂ ಇನ್ನಿತರ ಪಾತ್ರಹಿಕೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದಂತಹ ಸಂಕಷ್ಟ ದಲ್ಲಿರುವ ವಾರದಿಗಾರರಿಗೆ ಮಸಾಸನದ ಸಾವಲಭ್ಯ ವಿಸ್ತರುಸುವಂತೆ ಆದೇಶ ಈ ಕೊಡಲೇ ಜಾರಿಯಾಗುವ ನಿಟ್ಟಿನಲ್ಲಿ ಕ. ನಿ. ಪ ಧ್ವನಿಯ ಸಂಸ್ಥಾಪಕ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಘೋಷಣೆಗಳ ಮೂಲಕ ಪ್ರತಿಭಟಿಸಲಾಯಿತು.

ಸ್ವಾತಂತ್ರ ದೊರೆತು 76 ವರ್ಷ ಕಳೆದರು ಸಂವಿಧಾನದ ನಾಲ್ಕನೇ ಅಂಗವೆಂದೆ ಪ್ರಸಿದ್ದಿ ಹೊಂದಿರುವ ಮಾಧ್ಯಮದ ಪತ್ರಕರ್ತರಿಗೆ ಯಾವುದೇ ಸೌಕರ್ಯಗಳು ಸಿಕ್ಕೇಯಿಲ್ಲ. ಸ್ವಾತಂತ್ರ್ಯ ಬಂದು 76 ನೇ ವರ್ಷಕ್ಕೆ ಕಲಿಡುತ್ತಿರುವ ಸುಸಂಧರ್ಭದಲ್ಲಿ ಕೂಡ ಪತ್ರಕರ್ತರನ್ನು ಸರ್ಕಾರ ಕಡೆಗೆಣಿಸುತ್ತಿರುವುದು  ಮಲತಾಯಿ ಧೋರಣೆ ಹೊರತು ಬೇರೇನೂ ಅಲ್ಲ,ಈ ಹಿಂದೆ ಈ ಸಂಘಟನೆ ಪತ್ರಕರ್ತರ ಬೇಡಿಕೆಗಳಿಗೆ 2 ಬಾರಿ ಪ್ರತಿಭಟನೆ ನಡೆಸಿದ್ದರು ಪ್ರಯೋಜನ ಆಗಲಿಲ್ಲ ಎಂದು ವರದಿಗಾರರು ಬೇಸರ ವ್ಯಕ್ತ ಪಡಿಸಿದರು. ಇನ್ನು ಕ,ನಿ,ಪ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ರಾಮಾಯ್ಯ ಆಗುವುದು ಯಾವಾಗ..!

ರಾಜ್ಯದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಪತ್ರಕರ್ತರು ಇದ್ದು ಇದರಲ್ಲಿ ಬಹುಪಾಲು ಜನರಿಗೆ ಮಲಗಲು ಸೂರಿಲ್ಲ, ಹಾಗೂ ನಿವೃತ್ತಿ ಹೊಂದಿರುವ ಪತ್ರ ಕರ್ತರಿಗೆ ಮಸಾಶನ ಸಾವಲಭ್ಯ ವಿಸ್ತರಣೆ ಆಗಿಲ್ಲ ಹೀಗೆ ಹತ್ತಾರು ಸಮಸ್ಯೆಗಳನ್ನು ದಿನನಿತ್ಯ ಎದುರಿಸುತ್ತಿರುವ ಮಾಧ್ಯಮದವರ ಗೋಳು ಕೇಳುವರಿಲ್ಲಾಂತಾಗಿದೆ. ಸದಾ ಸಮಾಜದ ಒಳಿತಿಗಾಗಿ ಜೀವನವನ್ನೇ ತೇದುವ ಮಾಧ್ಯಮ ಪತ್ರಕರ್ತರ ಬದುಕಿಗೆ ನೆರವಾಗಲು ಸರ್ಕಾರ ಕೂಡಲೇ ಸ್ಪಂದಿಸಬೇಕು ಹಾಗೂ ಈ ನಮ್ಮ ಬೇಡಿಕೆಗಳಾದ, ಮಸಾಸನ, ಉಚಿತ ಬಸ್ ಪಾಸ್, ಹೀಗೆ ಹಲವಾರು ಯೋಜನೆಗಳ ಬೇಡಿಕೆಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ನಮ್ಮ ಮನವಿಗೆ ಸ್ಪಂದಿಸಿ ನೆರವೇರಿಸದೆ ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯಾದಂತ್ಯ ತಿರ್ವವಾದ ಹೋರಾಟ ಅನಿವಾರ್ಯ ಎಂದು ಹೆಚ್ಚರಿಸಿದರು. ಹೋರಾಟ ತಿರ್ವಗತಿಯಲ್ಲಿ ಸಾಗುತಿದ್ದಂತೆ, ಮುಖ್ಯ ಮಂತ್ರಿಗಳ ಮಾಧ್ಯಮ ಸಲಹೆಗರರಾದ k.v ಪ್ರಭಾಕರ್ ರವರು ಕ ನಿ ಪ ಬೇಡಿಕೆಗಳ ಮನವಿಯನ್ನು ಸ್ವೀಕರಿಸಿ, ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರ ಜೊತೆಗೆ ಚರ್ಚಿಸಿ ಆದಷ್ಟು ಬೇಗ ಈ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಅಶ್ವಾಸನೆ ನೀಡಿದರು. ವೇದಿಕೆಯಲ್ಲಿ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ, ಉಪಾಧ್ಯಕ್ಷರಾದ ಶ್ರೀರಾಮ ಚಾರ್, ರಾಜ್ಯಧ್ಯಕ್ಷರಾದ ಡಾ. ಎಂ. ವೆಂಕಟಸ್ವಾಮಿ, ಜಗಳೂರ್ ಲಕ್ಷ್ಮಣ್ ರಾವ್, ಪುರಂದರ ಲೋಕಿಕೆರೆ, ನಾಗಸೂರ್ಯ ರವಿ ಉಪಾಧ್ಯಕ್ಷರಾದ ಮುರುಳಿಕೃಷ್ಣ ಇನ್ನು ಅನೇಕ ಗಣ್ಯರು, ಹಿರಿಯ ಪತ್ರಕರ್ತರು ಇದ್ದರು.

ವರದಿಗಾರ

ಎ. ಚಿದಾನಂದ.

Related