ಆರ್‌ಟಿಓ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲ

ಆರ್‌ಟಿಓ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲ

ಬೆಂಗಳೂರು: ಕೋರಮಂಗಲ ಸೆಂಟ್ರಲ್ ಟ್ರಾನ್ಸ್‍ಪೋರ್ಟ್ ಅಧಿಕಾರಿಗಳು ತಮ್ಮ ಇಚ್ಛಾನುಸಾರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಿ ತಪಾಸಣೆ ನಡೆಸುವ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿ ಅಗರ ಹಿತರಕ್ಷಣಾ ವೇದಿಕೆ ಪ್ರತಿಭಟನೆ ಕೈಗೊಂಡಿತು.

ಹೆಚ್‍ಎಸ್‍ಆರ್ ಲೇ ಜೌಟ್‍ನಲ್ಲಿರುವ ಅಗರ ಕೆರೆ ಪಕ್ಕದಲ್ಲಿರುವ ಸರ್ವಿಸ್ ರಸ್ತೆಯಲ್ಲಿ ಪ್ರತಿನಿತ್ಯ 100-150 ವಾಹನಗಳನ್ನು ತಪಾಸಣೆಗೆ ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆಗೆ ಸಿಲುಕುವಂತಾಗಿದೆ ಎಂದು ದೂರಿದ ಅಗರ ಹಿತರಕ್ಷಣಾ ವೇದಿಕೆ ಆರ್‍ಟಿಓ ಅಧಿಕಾರಿಗಳ ವಿರುದ್ಧ ಪ್ರತಿಭಟಿಸುವ ಮೂಲಕ ಆಕ್ರೋಶ ಹೊರಹಾಕಿದರು.

ವೇಳೆ ಮಾತನಾಡಿದ ಸ್ಥಳೀಯ ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷರಾದ ಚಿಕ್ಕಣ್ಣ, ನರಸಿಂಹಮೂರ್ತಿ, ಸಾರ್ವಜನಿಕರು ಅನುಭವಿಸುತ್ತಿರುವ ತೊಂದರೆ ಬಗ್ಗೆ ಹಲವಾರು ಬಾರಿ ದೂರುಗಳು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಾರ್ವಜನಿಕರ ಬಗ್ಗೆ ತಲೆಕೆಡಿಸಿಕೊಳ್ಳದ ಆರ್‌ಟಿಓ ಅಧಿಕಾರಿಗಳು ತಮ್ಮ ದುರ್ವರ್ತನೆ ತೋರುತ್ತಿದ್ದಾರೆ. ಅಕ್ಕಪಕ್ಕದ ವಾಸಿಗಳಿಗೂ ತೊಂದರೆಯಾಗುತ್ತಿದ್ದು, ಸ್ಥಳಾಂತರಗೊಳಿಸಬೇಕು. ಅದೇ ರೀತಿ ಆರ್‌ಟಿಓ ಅಧಿಕಾರಿಗಳ ತಪಾಸಣೆಗೆ ಅನುವು ಮಾಡಿಕೊಡಬಾರದೆಂದು ಆಗ್ರಹಿಸಿದರು.

ಸ್ಥಳೀಯ ಕೋರಮಂಗಲ ಕೇಂದ್ರ ಸಹಾಯಕ ಎಆರ್‍ಟಿಓ ಮಾತನಾಡಿ, ವಾಹನದ ತಪಾಸಣೆಯಿಂದ ಸ್ಥಳಿಯರಿಗೆ ತೊಂದರೆಯಾಗುತ್ತಿರುವುದು ನಿಜ. ಯಾವುದೇ ವ್ಯವಸ್ಥೆಯಿಲ್ಲದೆ ಕಾರಣ ಸರ್ವೀಸ್ ರಸ್ತೆಯನ್ನು ಬಳಸಿಕೊಳ್ಳುತ್ತಿದ್ದೇವೆ. ಸೂಕ್ತ ವ್ಯವಸ್ಥೆಯಾದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ಭರವಸೆ ನೀಡಿದರು. ಮೇಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವುದಾಗಿ ಹೇಳಿದರು.

Related