ಶಾಸಕಿ ಮೇಲೆ ಎಫ್‌ಐಆರ್ ವಿರುದ್ಧ ಪ್ರತಿಭಟನೆ

ಶಾಸಕಿ ಮೇಲೆ ಎಫ್‌ಐಆರ್ ವಿರುದ್ಧ ಪ್ರತಿಭಟನೆ

ಬೆಂಗಳೂರು :  ಶಾಸಕಿ  ಸೌಮ್ಯಾರೆಡ್ಡಿ ವಿರುದ್ಧ ಆಧಾರ ರಹಿತ ಎಫ್‌ಐಆರ್ ದಾಖಲಿಸುವ ಮೂಲಕ ಸೇಡಿನ ರಾಜಕಾರಣ ಮಾಡುತ್ತಿದ್ದು ಹೋರಾಟಗಾರರ ವಿರುದ್ಧ ಸುಳ್ಳು ದೂರು ದಾಖಲಿಸುವ ಮೂಲಕ ಬಿಜೆಪಿ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಇದನ್ನು ಖಂಡಿಸಿ ಸೌಮ್ಯರೆಡ್ಡಿ ರವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಶಾಸಕರು ಹಾಗೂ ಸಂಸದರ ವಿರುದ್ಧ ಎಫ್ ಐಆರ್ ದಾಖಲಿಸಿಲ್ಲ ರೈತ ಪರ ಹೋರಾಟ ನಡೆಸಿದ ಹೋರಾಟಗಾರರ ವಿರುದ್ಧ ಸುಳ್ಳು ಎಫ್‌ಐಆರ್ ದಾಖಲಿಸುವ ಮೂಲಕ ಅತ್ಯಂತ ಕೀಳುಮಟ್ಟದ ರಾಜಕೀಯ ನಡೆಸುತ್ತಿದೆ ರೈತಪರ ಹೋರಾಟದಲ್ಲಿ ಶಾಸಕಿ ಸೌಮ್ಯರೆಡ್ಡಿ ರವರ ವಿರುದ್ಧ ಕೆಲವು ಮಹಿಳಾ ಪೊಲೀಸ್ ಪೇದೆಗಳು ಹಾಗೂ ಪೊಲೀಸ್ ಸಿಬ್ಬಂದಿ ಅತ್ಯಂತ ಕೆಟ್ಟ ರೀತಿಯಲ್ಲಿ ವರ್ತಿಸಿ ಅವರನ್ನು ನೆಲಕ್ಕೆ ತಳ್ಳಿ ಎಳೆದಾಡಿ ಅವಮಾನಿಸಿರುವ ವಿಡಿಯೋ ಚಿತ್ರಗಳು ಲಭ್ಯವಿದ್ದರೂ ಅದನ್ನು ಮರೆಮಾಚಲು ಹೋರಾಟ ನಡೆದ 2 ದಿನ ನಂತರ ಎಫ್‌ಐಆರ್ ದಾಖಲಿಸಿರುವುದು ಬಿಜೆಪಿಯ ರಾಜಕೀಯ ಬಣ್ಣ ಬಹಿರಂಗವಾಗಿದೆ.

ಪೊಲೀಸ್ ಇಲಾಖೆ ಎಫ್‌ಐಆರ್ ರದ್ದುಗೊಳಿಸಬೇಕು ಹಾಗೂ ಈ ವಿಷಯದಲ್ಲಿ ತನಿಖೆ ನಡೆಸಬೇಕು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರು ಸಂಸದರು ಶಾಸಕರು ಬಿಜೆಪಿ ಮುಖಂಡರು ನಡೆಸಿರುವ ದೌರ್ಜನ್ಯದ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು.

ಬೆಂಗಳೂರು ಮಹಾನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಕವಿಕ ಮಾಜಿ ಅಧ್ಯಕ್ಷ ಎಸ್.ಮನೋಹರ್ ಜಿ.ಜನಾರ್ಧನ್ ಎ.ಆನಂದ್ ಎಲ್.ಜಯಸಿಂಹ ಎಂ.ಎ ಸಲೀಮ್ ಈ.ಶೇಖರ್ ಬಿಟಿಎಂ ಅಧ್ಯಕ್ಷರುಗಳಾದ ಗೋವರ್ಧನ್ ರೆಡ್ಡಿ ಎಸ್.ಆನಂದ್. ಹರೀಶ್ ಬಾಬು ರಾಮಕೃಷ್ಣ. ಪ್ರಕಾಶ್. ಜಗನಾಥ್ ಆದಿಶೇಷ ಮಹೇಶ್ ಪುಟ್ಟರಾಜು ಉಮೇಶ್ ಮತ್ತು ಹಲವಾರು ಕಾಂಗ್ರೆಸ್ ಮುಖಂಡರುಗಳು ಭಾಗವಹಿಸಿದರು.

Related