ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ

ಖಾಸಗಿ ಶಾಲಾ ಶಿಕ್ಷಕರ ಪ್ರತಿಭಟನೆ

ಆನೇಕಲ್ : ಖಾಸಗಿ ಶಾಲಾ ಶಿಕ್ಷಕರು ಹಾಗೂ ಕಾಲೇಜು ಪ್ರಾಧ್ಯಾಪಕರು ಆರು ತಿಂಗಳಿಂದ ಶಾಲೆಗಳಲ್ಲಿ ಸಂಬಳ ನೀಡುತ್ತಿಲ್ಲ ಜೀವನ ನಡೆಸುವುದು ಕಷ್ಟವಾಗಿದೆ. ಒಪ್ಪತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಬಂದೊದಗಿದೆ ಆದ್ದರಿಂದ ಇತರರಿಗೆ ಸಹಾಯ ಹಸ್ತ ನೀಡಿದ ಹಾಗೆ ಸರ್ಕಾರ  ನಮಗೂ ಸಹ ಜೀವನ ನಡೆಸಲು ಸಣ್ಣ ಪ್ರಮಾಣದ ಸಹಾಯ ಹಸ್ತವನ್ನು ನೀಡಬೇಕು ಎಂದು ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಶಿಕ್ಷಕರು ಮಾತನಾಡಿ ಖಾಸಗಿ ಶಾಲೆಗಳಲ್ಲಿ ಕರ‍್ಯನರ‍್ವಹಿಸುತ್ತಿದ್ದ ಅನೇಕ ಶಿಕ್ಷಕರನ್ನು ಲಾಕ್ಡೌನ್ ಪ್ರಾರಂಭದಲ್ಲಿಯೇ ಕೆಲಸದಿಂದ ತೆಗೆದಿದ್ದಾರೆ. ಇನ್ನು ಕೆಲವು ಶಾಲೆಗಳು ಒಂದೆರಡು ತಿಂಗಳು ಸಂಬಳವನ್ನು ನೀಡಿದ್ದಾದರೂ ಈಗ ಸಂಪರ‍್ಣವಾಗಿ ನಿಲ್ಲಿಸಿದ್ದಾರೆ.

ಆದ್ದರಿಂದ ಸರಕಾರ ಇತರರಿಗೆ ಸಹಾಯ ನೀಡಿದಂತೆ ನಮಗೂ ಸಹ ಸಹಾಯ ಹಸ್ತವನ್ನು ನೀಡಬೇಕೆಂದು ಮನವಿ ಮಾಡುತ್ತಿದ್ದೇವೆ ತಮ್ಮ ಅಳಲನ್ನು ತೋಡಿಕೊಂಡರು. ವಕೀಲ ಸಂಘದ ಅಧ್ಯಕ್ಷ ರಂಗನಾಥ್ ಮಾತನಾಡಿ ಈಗಿನ ಶಿಕ್ಷಣ ಮಂತ್ರಿಗಳು ಬೆಳಗ್ಗೆ ಒಂದು ಮಾತನಾಡಿದರೆ ಸಂಜೆ ಇನ್ನೊಂದು ಮಾತನಾಡುತ್ತಾರೆ.

ಹೀಗಾಗಿ ದೇವೇಗೌಡರು ಹಾಗೂ ನಾವು  ಯಡಿಯೂರಪ್ಪನವರ ಬಳಿ ಎಲ್ಲವನ್ನು ರ‍್ಚಿಸಿ ಸಹಾಯ ಹಸ್ತವನ್ನು ನೀಡಬೇಕೆಂದು ಮನವಿಯನ್ನು ಮಾಡಿದ್ದೇವೆ. ಒಂದು ವೇಳೆ ಇದಕ್ಕೆ ಸ್ಪಂದಿಸದಿದ್ದರೆ ದೇವೇಗೌಡರೊಂದಿಗೆ ಜೆಡಿಎಸ್ ಕರ‍್ಯರ‍್ತರು ಖಾಸಗಿ ಶಾಲೆಯ ಶಿಕ್ಷಕರು ಒಟ್ಟಿಗೆ ಸೇರಿ ಮುಖ್ಯಮಂತ್ರಿಗಳ ಮನೆಯ ಮುಂದೆ ಬೃಹತ್ ಪ್ರತಿಭಟನೆಯನ್ನು ಮಾಡಲಾಗುವುದು ಇದು ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯ

Related