ದ್ರೌಪದಿ ಮುರ್ಮು ರವರಿಗೆ ಅಭಿನಂದನೆಗಳು ಸಲ್ಲಿಸಿದ ಪ್ರಧಾನಿ..!

ದ್ರೌಪದಿ ಮುರ್ಮು ರವರಿಗೆ ಅಭಿನಂದನೆಗಳು ಸಲ್ಲಿಸಿದ ಪ್ರಧಾನಿ..!

ನವದೆಹಲಿ, ಜುಲೈ 22 : ದೇಶದ ನೂತನ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ದೆಹಲಿಯಲ್ಲಿರುವ ದ್ರೌಪದಿ ಮುರ್ಮು ಅವರ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದ್ದಾರೆ.

ಟ್ವಿಟರ್ನಲ್ಲಿ ಕೂಡ ಶುಭಾಷಯ ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. “ಭಾರತದ ಇತಿಹಾಸ ಬರೆದಿದೆ. 1.3 ಶತಕೋಟಿ ಭಾರತೀಯರು ಆಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಮಯದಲ್ಲಿ, ಪೂರ್ವ ಭಾರತದ ದೂರದ ಭಾಗದಲ್ಲಿ ಜನಿಸಿದ ಬುಡಕಟ್ಟು ಸಮುದಾಯದಿಂದ ಬಂದ ಭಾರತದ ಮಗಳು ನಮ್ಮ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ! ಈ ಸಾಧನೆಗಾಗಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ಅಭಿನಂದನೆಗಳು” ಎಂದಿದ್ದಾರೆ.

Related