ಪುರೋಹಿತರಿಗೆ ಸಂಕಷ್ಟ ತಂದ ಕೊರೋನಾ

ಪುರೋಹಿತರಿಗೆ ಸಂಕಷ್ಟ ತಂದ ಕೊರೋನಾ

ಬೈಲಹೊಂಗಲ: ಮುಜರಾಯಿ ಇಲಾಖೆಯಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಪೌರೋಹಿತ್ಯ ನೀಡಿರುವ ಹಣವನ್ನು ಅರ್ಚಕರಿಗೂ ನೀಡಿ ಕುಟುಂಬಗಳ ಜೀವನಕ್ಕೆ ಆಸರೆಯಾಗಬೇಕೆಂದು ವೇ.ಮೂ.ಡಾ.ಮಹಾಂತಯ್ಯ ಶಾಸ್ರ್ತಿ ಆರಾದ್ರಿಮಠ ಮುಜರಾಯಿ ಇಲಾಖೆ ಸಚಿವ ಕೊಟ ಶ್ರೀನಿವಾಸ ಪೂಜೇರ ಅವರಿಗೆ ಮನವಿ ಸಲ್ಲಿಸಿದರು.

ಕೊರೋನಾದಿಂದ ಇಡೀ ದೇಶವೇ ತತ್ತರಿಸಿ ಹೋಗುತ್ತಿದ್ದು ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಕ್ಷೌರಿಕ, ಆಟೋಚಾಲಕ, ರೈತರಿಗೆ ಮತ್ತು ಸಮಗಾರ ಇನ್ನೂ ಅನೇಕ ಸಮುದಾಯಗಳಿಗೆ ಸರಕಾರ ಸಹಾಯಧನವನ್ನು ಕೊಟ್ಟಿದ್ದಾರೆ.

ಇತ್ತಿಚೆಗೆಷ್ಟೆ ಮುಜರಾಯಿ ಖಾತೆಗೆ ಒಳಪಡುವ ಅರ್ಚಕರಿಗೆ ಸಚಿವ ಮೂರು ತಿಂಗಳ ಹಣವನ್ನು ಒಬ್ಬ ಅರ್ಚಕನಿಗೆ ತಲಾ 12 ಸಾವಿರ ರೂ. ಗಳಂತೆ ಬಿಡುಗಡೆ ಮಾಡಿದ್ದಾರೆ. ಮುಜರಾಯಿ ಖಾತೆಗೆ ಒಳಪಡದೇ ಇರುವ ಪುರೋಹಿತರಿಗೆ ಜೀವನ ನಡೆಸಲು ಬಹಳ ಕಷ್ಟಕರವಾಗಿದ್ದು, ಅವರ ಜೀವನಕ್ಕೆ ನೆರವಾಗಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಡಾ.ರಾಜಕುಮಾರ ಶಾಸ್ರ್ತಿಗಳು, ಶಿವಬಸಯ್ಯ ಶಾಸ್ರ್ತಿಗಳು, ಪ್ರಭಯ್ಯ ಶಾಸ್ರ್ತಿಗಳು, ಇಂಧುದರ ಶಾಸ್ರ್ತಿಗಳು. ಸತ್ತೂರು ಶಾಸ್ರ್ತಿಗಳು ಇದ್ದರು.

Related