‘ಆಯುಷ್ಮಾನ್ ಭವ’ ಅಭಿಯಾನಕ್ಕೆ ರಾಷ್ಟ್ರಪತಿ ಚಾಲನೆ

‘ಆಯುಷ್ಮಾನ್ ಭವ’ ಅಭಿಯಾನಕ್ಕೆ ರಾಷ್ಟ್ರಪತಿ ಚಾಲನೆ

ನವದೆಹಲಿ,ಸೆ. 13: ದೇಶದಾದ್ಯಂತ ಆರೋಗ್ಯ ಸೇವೆಗಳ ಲಭ್ಯತೆ, ಪ್ರಾಮುಖ್ಯತೆ ಕುರಿತು ಜನರಿಗೆ ತಿಳಿಸುವ ಸದುದ್ದೇಶದ ‘ಆಯುಷ್ಮಾನ್ ಭವ’ ಅಭಿಯಾನಕ್ಕೆ ದ್ರೌಪದಿ ಮುರ್ಮು ಚಾಲನೆ ನೀಡಲಿದ್ದಾರೆ.

‘ಆಯುಷ್ಮಾನ್ ಭವ’ ಭಾರತ ದೇಶಾದ್ಯಂತ ಒಂದು ಆರೋಗ್ಯ ಉಪಕ್ರಮವಾಗಿದೆ. ದೇಶದ ಪ್ರತಿ ಹಳ್ಳಿ, ಗ್ರಾಮೀಣಭಾಗದಿಂದ ಹಿಡಿದು ನಗರದ ತಲುಪುವ ಮೂಲಕ ಆರೋಗ್ಯ ಸೇವೆಗಳ ಲಭ್ಯತೆ ತಿಳಿಸುವ ಗುರಿಗಲಳನ್ನು ಹೊಂದಿದೆ.

ಈ ಅಭಿಯಾನವು ಆರೋಗ್ಯ ಇಲಾಖೆ, ಗ್ರಾಮಪಂಚಾಯತಿ, ಇತರ ಸರ್ಕಾರಿ ಇಲಾಖೆಗಳು, ಗ್ರಾಮ ಮತ್ತು ನಗರ ಪ್ರದೇಶಗಳ ಸ್ಥಳೀಯ ಚುನಾಯಿತ ಸಂಸ್ಥೆಗಳ ಸಮನ್ವಯದಲ್ಲಿ ಈ ಉಪಕ್ರಮ ನಡೆಯಲಿದೆ.

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಅಭಿಯಾನ ಆರಂಭ ಕುರಿತು ದೇಶದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆಯುಷ್ಮಾನ್ ಭವ ಆರೋಗ್ಯ ಸೇವೆಯ ಪ್ರಯೋಜನ ಬಗ್ಗೆ ತಿಳಿಸಿದರು.

Related