ಸ್ಪಂದನಾ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಸಿದ್ಧತೆ

ಸ್ಪಂದನಾ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲು ಸಿದ್ಧತೆ

ಬೆಂಗಳೂರು: ಚಿನ್ನಾರಿ ಮುತ್ತನ ಬದುಕಲ್ಲಿ ವಿಧಿಯೇ ಆಟವಾಡಿದಂತಾಗುತ್ತಿದೆ ಚಿಕ್ಕವಯಸಿನಲ್ಲಿ ಹಲವಾರು ಕನಸುಗಳನ್ನು ಹೊಂದಿದ್ದ ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸಾವನ್ನಪ್ಪಿರುವುದು ಇಡೀ ಕರ್ನಾಟಕಕ್ಕೆ ದಿಗಿಲು ಬಡಿದಂತಾಗಿದೆ.

ಹೌದು ನಟ ವಿಜಯ್ ರಾಘವೇಂದ್ರ ಅವರ ಪತ್ನಿಚಿಕ್ಕವಯಸಿನಲ್ಲಿ ವಿದೇಶ ಪ್ರಯಾಣದಲ್ಲಿದ್ದಾಗ ಹೃದಯಘಾತದಿಂದ ಮೃತಪಟ್ಟಿದ್ದಾರೆ.

ಇನ್ನು ಸ್ಪಂದನಾ ಸಣ್ಣ ವಯಸ್ಸಲ್ಲಿ ಏಕಾಏಕಿ ಮೃತಪಟ್ಟಿದ್ದು ಅನೇಕರಿಗೆ ಶಾಕ್​ ತಂದಿದೆ. ಸದ್ಯ  ವಿಜಯ್ ರಾಘವೇಂದ್ರ ಹಾಗೂ ಕುಟುಂಬ ಬ್ಯಾಂಕಾಕ್​​ನಲ್ಲೇ ಇದೆ. ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಈಗಾಗಲೇ ಪೂರ್ಣಗೊಂಡಿದೆ. ಇಂದು ಮಂಗಳವಾರ ಸಂಜೆ ಅಥವಾ ರಾತ್ರಿ ಬ್ಯಾಂಕಾಕ್​ನಿಂದ ಬೆಂಗಳೂರಿಗೆ ಸ್ಪಂದನಾ ಪಾರ್ಥಿವ ಶರೀರವನ್ನು ತರಲಾಗುತ್ತದೆ. ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.

ಸ್ಪಂದನಾ ಅವರಿಗೆ ಆಗಸ್ಟ್ 6ರಂದು ಹೃದಯಾಘಾತ ಆಯಿತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನ ಆಗಿಲ್ಲ. ಸೋಮವಾರ (ಆಗಸ್ಟ್ 7) ಮರಣೋತ್ತರ ಪರೀಕ್ಷೆ ನಡೆದಿದೆ. ಬೇರೆ ದೇಶದ ವ್ಯಕ್ತಿ ಬಾಂಕಾಕ್​​ನಲ್ಲಿ ಮೃತಪಟ್ಟರೆ ಅದನ್ನು ತೆಗೆದುಕೊಂಡು ಹೋಗಲು ಒಂದಷ್ಟು ಕಾನೂನು ಪ್ರಕ್ರಿಯೆಗಳು ಇವೆ. ಅದನ್ನು ಕುಟುಂಬದವರು ಇಂದು ಬೆಳಿಗ್ಗೆ ಪೂರ್ಣಗೊಳಿಸಲಿದ್ದಾರೆ.

ಕಾನೂನು ಪ್ರಕ್ರಿಯೆ ಮಧ್ಯಾಹ್ನದ ಒಳಗೆ ಮುಗಿದರೆ ಮಧ್ಯಾಹ್ನ ಎರಡು ಗಂಟೆಗೆ ಇರುವ ಬ್ಯಾಂಕಾಕ್​-ಬೆಂಗಳೂರು ಇಂಡಿಗೋ ಫ್ಲೈಟ್ ಮೂಲಕ ಸ್ಪಂದನಾ ಮೃತದೇಹವನ್ನು ತರಲಾಗುತ್ತದೆ. ಹಾಗಾದಲ್ಲಿ ಸಂಜೆ 6 ಘಂಟೆಗೆ ಬೆಂಗಳೂರಿಗೆ ಕುಟುಂಬ ಬರಲಿದೆ. ಒಂದೊಮ್ಮೆ ವಿಳಂಬ ಆದರೆ, ಬ್ಯಾಂಕಾಕ್​ನಿಂದ ಬೆಂಗಳೂರಿಗೆ ರಾತ್ರಿ 9:30ಕ್ಕೆ ಥೈ ಏರ್​​ಲೈನ್ಸ್ ವಿಮಾನ ಇದೆ. ಹಾಗಾದಲ್ಲಿ ಪಾರ್ಥಿವ ಶರೀರ ತರುವುದು ಮಧ್ಯರಾತ್ರಿ ಆಗಲಿದೆ.

 

Related