ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ರವರಿಗೆ ಪ್ರಶಂಸೆ

ಸರ್ಕಲ್ ಇನ್ಸ್ಪೆಕ್ಟರ್ ಎಂ.ಬಿ.ನವೀನ್ ಕುಮಾರ್ ರವರಿಗೆ ಪ್ರಶಂಸೆ

ದೊಡ್ಡಬಳ್ಳಾಪುರ- ಬ್ಲಾಕ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಮಾ.೨೩ರಂದು ನಗರದ ಕೆಂಪೇಗೌಡನಗರದಲ್ಲಿ ಸಂಜೆ ವೇಳೆ ಮನೆಯ ಮುಂದೆ ನಿಂತಿದ್ದ ಮಹಿಳೆಯೋರ್ವರ ಮಾಂಗಲ್ಯ ಸರದ ಕದ್ದು ಹಾಗೂ ಮೇ.೨೯ರಂದು ಖಾಸ್ ಬಾಗ್ ರೈಲ್ವೆ ಬ್ರಿಡ್ಜ್ ಬಳಿ ನಿಂತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಳ್ಳತನ ಮಾಡಿರುವ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಕುರಿತು ಡಿವೈಎಸ್ಪಿ ಟಿ.ರಂಗಪ್ಪ ಹಾಗೂ ಎಂ.ಬಿ.ನವೀನ್ ಕುಮಾರ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿ ಆರೋಪಿಗಳ ಪತ್ತೆ ಕಾರ್ಯಾಚರಣೆ ನಡೆಸಲಾಗಿದ್ದು, ಭುವನೇಶ್ವರಿ ನಗರದ ನವೀನ್.ಪಿ (೨೮ವರ್ಷ), ಜಾಲಪ್ಪ ಕಾಲೇಜು ರಸ್ತೆಯ ಪುನೀತ್ ಕುಮಾರ್.ಎಸ್ (೨೩ವರ್ಷ) ಇವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದೊಡ್ಡಬಳ್ಳಾಪುರ ನಗರದಲ್ಲಿ ಎರಡು, ಗ್ರಾಮಾಂತರ ಠಾಣೆ, ವಿಶ್ವನಾಥಪುರ ಠಾಣೆ ಹಾಗೂ ಚಿಕ್ಕಬಳ್ಳಾಪುರ ನಗರ ಠಾಣೆ ವ್ಯಾಪ್ತಿಯಲ್ಲಿ ಬ್ಲಾಕ್ ಪಲ್ಸರ್ ದ್ವಿಚಕ್ರ ವಾಹನ ಬಳಸಿಕೊಂಡು ತಲಾ ಒಂದು ಚಿನ್ನದ ಮಾಂಗಲ್ಯ ಸರ ಕಳ್ಳತನ ಮಾಡಿರುವುದು ತಿಳಿದುಬಂದಿದೆ.
ಬAಧಿತರಿAದ ಸುಮಾರು ೫ ಲಕ್ಷ ಮೌಲ್ಯದ ೫ ಚಿನ್ನದ ಸರ, ಒಂದು ಲಕ್ಷ ಮೌಲ್ಯದ ಬ್ಲಾಕ್ ಪಲ್ಸರ್ ದ್ವಿಚಕ್ರ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸರನ್ನು ಐಜಿಪಿ ಚಂದ್ರಶೇಖರ್, ಎಸ್ಪಿ ಡಾ.ವಂಶಿಕೃಷ್ಣ, ಎಎಸ್ಪಿ ಲಕ್ಷ್ಮೀಗಣೇಶ್ ಪ್ರಶಂಸೆ ಸಲ್ಲಿಸಿದ್ದಾರೆ.

Related