ಪಿಂಕ್ ನೋಟ್ ಮಾಯ  

ಪಿಂಕ್ ನೋಟ್ ಮಾಯ   

ಬೆಂಗಳೂರು, ಫೆ. 23 : ಇಷ್ಟು ದಿನ 2 ಸಾವಿರ ರೂ.ಮುಖಬೆಲೆಯ ನೋಟು ಬ್ಯಾನ್ ಆಗುತ್ತೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಅದಕ್ಕೆ ಪುಷ್ಠಿ ಎಂಬಂತೆ ಮಾರ್ಚ್ 1ರಿಂದ ಎಟಿಎಂಗಳಲ್ಲಿ 2 ಸಾವಿರ ರೂ.ಮುಖಬೆಲೆಯ ನೋಟು ಸಿಗಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಬೆಂಗಳೂರಿನಲ್ಲಿ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂಬುದು ಜನರ ಮಾತಾಗಿದ್ದು, ಸಿಲಿಕಾನ್ ಸಿಟಿಯ ಎಟಿಎಂಗಳಲ್ಲಿ 2 ಸಾವಿರ ರೂಪಾಯಿ ನೋಟ್ ಸಿಗುತ್ತಾ ಇದೆಯಾ?

ಬ್ಯಾಂಕ್ ಹೇಳಿದ್ದೇನು? ;  ಫೆ. 17ರಂದು ಇಂಡಿಯನ್ ಬ್ಯಾಂಕಿನ ಲೆಂಡರ್ಸ್ ಡಿಜಿಟಲ್ ಬ್ಯಾಂಕಿಂಗ್ ವಿಭಾಗ ಸುತ್ತೋಲೆ ಹೊರಡಿಸಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಭಾರಿ ಮೊತ್ತದ್ದಾಗಿದ್ದು, ಇದರಿಂದ ಚಿಲ್ಲರೆ ವ್ಯಾಪಾರಿಗಳು ಹಾಗೂ ಗ್ರಾಹಕರು ಚೇಂಜ್ ಪಡೆಯಲು ಸಮಸ್ಯೆ ಎದುರಿಸುತ್ತಿದ್ದಾರೆ. ಆದ್ದರಿಂದ ಈ ನೋಟುಗಳ ವ್ಯವಹಾರವನ್ನು ನಮ್ಮ ಬಾಂಕಿನಲ್ಲಿ ಸ್ಥಗಿತಗೊಳಿಸಲಾಗಿದ್ದು, ಕೇವಲ 100, 200 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಮಾತ್ರ ನಮ್ಮ ಎಟಿಎಂಗಳಲ್ಲಿ ಲಭ್ಯವಿರುತ್ತೆ ಎಂದು ತಿಳಿಸಿತ್ತು. ಅಲ್ಲದೇ ಮಾ.1ರಿಂದ 2000 ರೂ.ನೋಟು ನಮ್ಮಲ್ಲಿ ಸಿಗಲ್ಲ ಎಂದು ಹೇಳಿತ್ತು. ಕಳೆದ ನಾಲ್ಕೈದು ತಿಂಗಳಿನಿಂದ ಎಟಿಎಂಗಳಲ್ಲಿ 2 ಸಾವಿರ ನೋಟು ಹೆಚ್ಚಾಗಿ ಸಿಗುತ್ತಿಲ್ಲ. 2 ಸಾವಿರ ರೂಪಾಯಿ ನೋಟು ಸಿಗ್ತಿಲ್ಲ ಎಂದು ಗ್ರಾಹಕರು ಮಾತಾಡಿಕೊಳ್ಳುತ್ತಿದ್ದರು. ಅದಕ್ಕೆ ಪುಷ್ಠಿ ಎಂಬಂತೆ ಇಂಡಿಯಾನ್ ಬ್ಯಾಂಕ್ ಆತಂಕಕಾರಿ ಮಾಹಿತಿ ನೀಡಿದೆ.

Related