ಜೆಪಿಯವರು ಮಾಡಿದ ಪಿಕ್ ಪಾಕೆಟ್ ನಮ್ಮ ಮೇಲೆ ಹಾಕ್ತಿದ್ದಾರೆ: ಡಿಕೆಶಿ

ಜೆಪಿಯವರು ಮಾಡಿದ ಪಿಕ್ ಪಾಕೆಟ್ ನಮ್ಮ ಮೇಲೆ ಹಾಕ್ತಿದ್ದಾರೆ: ಡಿಕೆಶಿ

ಬೆಂಗಳೂರು: ಲೋಕಸಭಾ ಚುನಾವಣೆಗೆ ದಿನ ಗಣನೆ ಪ್ರಾರಂಭವಾಗಿದ್ದರೂ ಕೂಡ ರಾಜ್ಯ ರಾಜಕೀಯದಲ್ಲಿ ಆಡಳಿತ ಪಕ್ಷದ ಮೇಲೆ ವಿರೋಧ ಪಕ್ಷಗಳು ಮತ್ತು ವಿರೋಧ ಪಕ್ಷದ ಮೇಲೆ ಆಡಳಿತ ಪಕ್ಷಗಳು ಜಾಹೀರಾತು ನೀಡುವ ಮೂಲಕ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.

ಕಾಂಗ್ರೆಸ್‌ ಪಕ್ಷ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಬಿಜೆಪಿ ಪಕ್ಷ ಟೀಕಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ನೀಡಿರುವ ಚೊಂಬಿನ ಜಾಹೀರಾತನ್ನು ಅರಗಿಸಿಕೊಳ್ಳುವುದು ಬಿಜೆಪಿಯವರಿಂದ ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ನಮ್ಮ ಮೇಲೆ ಆರೋಪ ಮಾಡಿ ಜಾಹೀರಾತು ನೀಡುತ್ತಿದ್ದಾರೆ ಎಂದು ಹೇಳಿದರು.

ನಾವು ಪಿಕ್​ಪಾಕೆಟ್ ಮಾಡಿದ್ದೇವೆ ಅಂತ ಜಾಹೀರಾತು ನೀಡಿದ್ದಾರೆ. ಬಿಜೆಪಿಯವರು ಮಾಡಿದ ಪಿಕ್ ಪಾಕೆಟ್ ನಮ್ಮ ಮೇಲೆ ಹಾಕ್ತಿದ್ದಾರೆ. ಬಿಜೆಪಿಯವರಿಗೆ ನಾವು ನೀಡಿದ ಚೊಂಬನ್ನು ಅರಗಿಸಿಕೊಳ್ಳಲು ಆಗ್ತಿಲ್ಲ. ಬರ ಪರಿಹಾರ ನೀಡುವುದಾಗಿ ಕೇಂದ್ರ ಹೇಳಿದೆ, ನಮಗೆ ಪರಿಹಾರ ಸಿಗುತ್ತೆ. ನಮಗೆ ನ್ಯಾಯ ಸಿಗುತ್ತೆ. ಸಾಂಕೇತಿಕವಾಗಿ ಹೋರಾಟ ಪ್ರಾರಂಭಿಸಿದ್ದೇವೆ ಎಂದು ಅವರು ಹೇಳಿದರು.

 

 

Related