ಬಂಕ್‌ನಲ್ಲಿ ಪೆಟ್ರೋಲ್, ಡೀಸೆಲ್ ಬದಲು ನೀರು

ಬಂಕ್‌ನಲ್ಲಿ ಪೆಟ್ರೋಲ್, ಡೀಸೆಲ್ ಬದಲು ನೀರು

ಯಾದಗಿರಿ : ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ಬಂಕ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬದಲು ನೀರು ಹಾಕುತ್ತಿದ್ದು, ಪೆಟ್ರೋಲ್ ಹಾಕಿಸಿಕೊಂಡ ವಾಹನಗಳ ಇಂಜಿನ್ ಬ್ಲಾಕ್ ಆಗಿ ಕೆಟ್ಟು ನಿಂತ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಈ ಅವಾಂತರ ಕಳೆದ ಎರಡು ದಿನಗಳಿಂದ ನಾರಾಯಣಪುರದಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್ ನಲ್ಲಿ ಇಂಧನ ಬದಲಿಗೆ ನೀರು ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದ್ದವು.

ಸೋಮವಾರ ರಾತ್ರಿ ನಾರಾಯಣಪುರ ಗ್ರಾಮದ ಹನುಮಂತ ಎಂಬುವವರು ಹೀಗಾಗಿ ಹನುಮಂತ ಮತ್ತು ಆತನ ಸ್ನೇಹಿತ ಇಂದು ಬೆಳಗ್ಗೆ ಬಂಕ್ ಗೆ ತೆರಳಿ ಡೀಸೆಲ್ ಮತ್ತು ಪೆಟ್ರೋಲ್ ಪರೀಕ್ಷೆ ಮಾಡಿಸಿದಾಗ, ಅದರಲ್ಲಿ ನೀರು ಬೆರೆತ ಸತ್ಯ ಬಹಿರಂಗವಾಗಿದೆ.

ಬಂಕ್ ನಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಹಾಕಿಸಿಕೊಂಡ ಗ್ರಾಹಕರು, ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related