ಆಧ್ಯಾತ್ಮದಿಂದ ಮನಸ್ಸಿಗೆ ಶಾಂತಿ : ಅಡವಿಲಿಂಗ ಮಹಾರಾಜ

ಆಧ್ಯಾತ್ಮದಿಂದ ಮನಸ್ಸಿಗೆ ಶಾಂತಿ : ಅಡವಿಲಿಂಗ ಮಹಾರಾಜ

ವಡಗೇರಾ : ಪ್ರಸಕ್ತ ದಿನಗಳಲ್ಲಿ ಜನರುತಮ್ಮದೈನಂದಿನ ಸಂಸಾರಿಕ ಒತ್ತಡದಲ್ಲಿ ಜೀವನ ಕಳೆಯುತ್ತಿದ್ದಾರೆ, ಅವರು ಸ್ವಲ್ಪ ಸಮಯ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಮೀಸಲಿಟ್ಟರೇ ಮನಸ್ಸಿಗೆ ಶಾಂತಿ ಸಿಗುವ ಜೊತೆಗೆ ಸಕರಾತ್ಮಕ ಚಿಂತನೆಗಳನ್ನು ಮೂಡಿ ಬದಲಾವಣೆಗೆ ಪ್ರೇರಣೆ ಶಕ್ತಿ ನೀಡುತ್ತದೆ ಎಂದು ವೀರಗೋಟದ ಮೌನೇಶ್ವರ ಪೀಠದ ಪೀಠಾಧಿಪತಿ ಅಡವಿಲಿಂಗ ಮಹಾರಾಜರು ನುಡಿದರು.
ಜಿ.ಪಂ ಮಾಜಿ ಸದಸ್ಯ ಶ್ರೀನಿವಾಸ ರೆಡ್ಡಿ ಪಾಟೀಲ್ ಚನ್ನೂರ ನಿವಾಸದಲ್ಲಿ ತೆಲಂಗಾಣದ ಶ್ರೀಕೋಟಿಬಿಲ್ವ ಲಿಂಗೇಶ್ವರ ಮಠ, ತಂಗಡಪಲ್ಲಿ ಪೀಠಾಧಿಪತಿ ಶಿವಯೋಗಿ ಶಿವಾಚಾರ್ಯರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು.
ತಂಗಡಪಲ್ಲಿ ಶ್ರೀಗಳಾದ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರ ದಿನಗಳು ಈ ಸಮಯದಲ್ಲಿ ಅವರು ಕೈಗೊಳ್ಳುವ ವ್ರತಗಳಿಂದ ಚಿತ್ತಶುದ್ಧಿ, ಆತ್ಮಶುದ್ಧಿಯಾಗಿ ಸಂಸ್ಕಾರ ಬದುಕು ರೂಪುಗೊಳ್ಳುತ್ತದೆ ಎಂದು ಹೇಳಿದರು.
ಯಲ್ಹೇರಿ ಶ್ರೀಗಳಾದ ಗಂಗಾಧರ ಶಿವಾಚಾರ್ಯ ಅವರ ಮಾರ್ಗದರ್ಶನದಲ್ಲಿ ನಾವು ದಿನಾಲೂ ಭಕ್ತರ ಆಹ್ವಾನದ ಮೇರೆಗೆ ತೆರಳಿ ಇಷ್ಟಲಿಂಗ ಮಹಾಪೂಜೆ ಮೂಲಕ ವೀರಶೈವಧರ್ಮದ ಆಚರಣೆಗಳನ್ನು ಭಕ್ತರಿಗೆ ತಿಳಿಸುವ ಮೂಲಕ ಸಾಮರಸ್ಯ ಮೂಡಿಸಲು ಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.
ಕೊರೊನಾ ವೈರಸ್ ದಾಳಿಯಿಂದ ರೈತಾಪಿ ವರ್ಗ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ, ಭಗವಂತನ ಕೃಪೆಯಿಂದ ಅವರ ಸಮಸ್ಯೆಗಳು ದೂರವಾಗಿ ಆರ್ಥಿಕವಾಗಿ ಬದಲಾವಣೆ ಸಾಧಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಶ್ರೀನಿವಾಸರೆಡ್ಡಿ ಪಾಟೀಲ್‌ಚನ್ನೂರ, ಭೀಮಣ್ಣ ನಾಡಗೌಡ ಚಿಂಚೋಡಿ, ರಾಚಯ್ಯಸ್ವಾಮಿ, ಗುರುಲಿಂಗ ಪೂಜಾರಿ, ಸಿದ್ದಯ್ಯಸ್ವಾಮಿ ಜೋಳದಡಗಿ, ರಾಚೋಟಿ ಸ್ವಾಮಿ ಹಿರೇಮಠ ಗುಲಸರಂ, ಸಂಗಾರೆಡ್ಡಿ ಗೂಗಲ್ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

Related