(Paycm)ಕಾಂಗ್ರೇಸ್ ಮಾದರಿ ಹಾದಿ ಹಿಡಿದ: ಬಿಜೆಪಿ

(Paycm)ಕಾಂಗ್ರೇಸ್ ಮಾದರಿ ಹಾದಿ ಹಿಡಿದ: ಬಿಜೆಪಿ

ಬೆಂಗಳೂರು: ಕಾಂಗ್ರೇಸ್ ಸರ್ಕಾರದ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿಯವರ ಲಂಚ ಸ್ವೀಕಾರ ಆರೋಪ ಕುರಿತು ಸಿಐಡಿ ತನಿಖೆಗೆ ಒಳಪಡಿಸಬೇಕೆನ್ನುವ ಬಿಜೆಪಿ ಪಕ್ಷ ಹೋರಾಟದ ಬೆನ್ನಲ್ಲೇ, ಕಾಂಗ್ರೇಸ್ ಪಕ್ಷದವರು ಬಿಜೆಪಿ ಪಕ್ಷದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ದ(Paycm) ಅಭಿಯಾನವನ್ನು ಆರಂಭಿಸಿದ್ದರು. ಈಗ ಬಿಜೆಪಿಯವರು ʼಉಪ್ಪು ತಿಂದವರು ನೀರು ಕುಡಿಲೇಬೇಕುʼ ಎನ್ನುವ ಹಾಗೆ ಕಾಂಗ್ರೇಸ್ನ ಪೇಸಿಎಂ ಅಭಿಯಾನದ ಮಾದರಿಯಲ್ಲೇ ಬಿಜೆಪಿ, ಕೃಷಿ ಸಚಿವ ಚಲುವರಾಯಸ್ವಾಮಿ ಲಂಚ ಸ್ವೀಕಾರ ವಿರುದ್ಧ ʼPayCS’ ಫೋಸ್ಟರ್ ಅನಾವರಣ ಮಾಡಿದ್ದಾರೆ.

ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಚೆಲುವರಾಯಸ್ವಾಮಿ ಭಾವಚಿತ್ರ ಇದ್ದ ಫ್ಲೆಕ್ಸ್ ಗೆ ʼಪೇಸಿಎಸ್ ʼಪೋಸ್ಟರ್ ಅಂಟಿಸಿ ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮದ್ಯಭಾಗದಲ್ಲಿಅಂಟಿಸಿದ ಫೋಸ್ಟರ್ ಗಳನ್ನು ಪೊಲೀಸರು ಕಿತ್ತು ಹಾಕಿದರು, ಬಿಜೆಪಿಯವರು ಎನ್ನಲಾದ ಕೆಲವರನ್ನು ಪೊಲೀಸರು ಬಂಧಿಸಿದರು. ಆದರೆ ಇದು ಜನರ ಅಭಿಯಾನವಾಗಿದ್ದು, ನಾವು ಮಾಡಿಲ್ಲ ಎಂದು ಬಿಜೆಪಿ ಹಾಗೂ ಜೆಡಿಎಸ್ ಹೇಳಿಕೊಳ್ಳುವ ಮೂಲಕ ಇದರಿಂದ ಅಂತರ ಕಾಪಾಡಿಕೊಂಡಿವೆ. ಚಲುವರಾಯಸ್ವಾಮಿ ಫೋಟೋದೊಂದಿಗೆ ಕ್ಯೂಆರ್ ಕೋಡ್ ಇರುವ ಫೋಸ್ಟರ್ ಗಳು ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುತ್ತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕರ್ನಾಟಕ ಕಾಂಗ್ರೆಸ್ಗೆ ಚಲುವರಾಯಸ್ವಾಮಿ ಪಾವತಿಸಲು ಈ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಎಂದು ಫೋಸ್ಟರ್ ನಲ್ಲಿ ಬರೆಯಲಾಗಿದೆ.

ಸಚಿವರ ವಿರುದ್ಧ ಮಂಡ್ಯದ ಜನ ಸೆಡ್ಡು ಹೊಡೆದಿದ್ದಾರೆ. ಪ್ರಚಾರದಲ್ಲಿ ತಮ್ಮ ಪಕ್ಷದ ಪಾತ್ರವಿಲ್ಲ ಎಂದು ಜೆಡಿಎಸ್ ಮುಖಂಡರೊಬ್ಬರು ಹೇಳಿದ್ದಾರೆ. ಮಂಡ್ಯ ಕಾಂಗ್ರೆಸ್ ಘಟಕದಲ್ಲಿ ಹಲವು ಸಮಸ್ಯೆಗಳಿವೆ. ಇದು ಅವರ ಕೈವಾಡವಿರಬಹುದು ಎಂದು ಅವರು ತಿಳಿಸಿದ್ದಾರೆ.

ಇತ್ತೀಚಿಗೆ ಕೃಷಿ ಇಲಾಖೆಯ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಕೆಮಾಡಿದ್ದರು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಾಜ್ಯಪಾಲರು ಸೂಚಿಸಿದ್ದರು. ಆದರೆ ರಾಜ್ಯಪಾಲರಿಗೆ ನಕಲಿ ಪತ್ರ ಸಲ್ಲಿಸಲಾಗಿದೆ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಕುರಿತು ಸಿಐಡಿ ತನಿಖೆಗೆ ಆದೇಶಿಸಿದ್ದರು. ನಕಲಿ ಪತ್ರ ಸೃಷ್ಟಿ ಹಿಂದೆ ಬಿಜೆಪಿ ಮತ್ತು ಅವರ ‘ಸಹೋದರ ಹೆಚ್.ಡಿ. ಕುಮಾರಸ್ವಾಮಿ ಕೈವಾಡವಿರಬಹುದೆಂದು ಮುಖ್ಯಮಂತ್ರಿ ಹೇಳಿದ್ದರು. ಚಲುವರಾಯಸ್ವಾಮಿ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ, ನಕಲಿ ಪತ್ರ ಎಂದು ತಿಳಿಸಿದ್ದಾರೆ.

ವರದಿಗಾರರು

ಎಲ್.ಮಂಜುನಾಥ(ವಿಜಯನಗರ)

Related