ಆ್ಯಂಬುಲೆನ್ಸ್ ಗಾಗಿ ರೋಗಿಗಳ ಪರದಾಟ

ಆ್ಯಂಬುಲೆನ್ಸ್ ಗಾಗಿ ರೋಗಿಗಳ ಪರದಾಟ

ಯಾದಗಿರಿ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಾ ಕೇಂದ್ರದಲ್ಲಿಯೇ ಕಳೆದ ಒಂದು ವಾರದಿಂದ ಆ್ಯಂಬುಲೆನ್ಸ್ ಸೇವೆ ಸಿಗದೆ ಕೋವಿಡ್ ರೋಗಿಗಳ ಪರದಾಡುವಂತಾಗಿದೆ.

ಜಿಲ್ಲೆಯಲ್ಲಿ ರೋಗಿಗಳ ಪಾಲಿಗೆ ಆ್ಯಂಬುಲೆನ್ಸ್ ಗಳು ಸಂಜೀವಿನಿಯಾಗಿವೆ. ಹುಣಸಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾವುದೇ ತುರ್ತು ಸೇವೆ ಸಿಗುತ್ತಿಲ್ಲ. ಸರಕಾರ ಕೋವಿಡ್ ರೋಗಕ್ಕೆ ಕಡಿವಾಣ ಹಾಕಲು ಹೆಚ್ಚಿನ ಪ್ರಮಾಣದಲ್ಲಿ ಕೋವಿಡ್ ಟೆಸ್ಟ್ ಮಾಡಿಸುತ್ತಿದೆ.

ಈ ಬಗ್ಗೆ ಮಾತನಾಡಿದ ಬಸವರಾಜ ಅವರು ಕೋವಿಡ್ ರೋಗಿಗಳಿಗೆ ಆ್ಯಂಬುಲೆನ್ಸ್ ಸೌಲಭ್ಯ ಸ್ಥಗಿತ ಮಾಡಿರುವುದರಿಂದ ಬಡ ರೋಗಿಗಳು ಹಾಗೂ ತೀವ್ರ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ ಎಂದರು.

ಬಹುತೇಕ ಸೋಂಕಿತರು ಬೈಕ್ ಹಾಗೂ ಕಾರು ಮೂಲಕ ತೆರಳಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಬಡವರು ಹಾಗೂ ತೀವ್ರ ಸಮಸ್ಯೆದಿಂದ ಬಳಲುತ್ತಿರುವ ರೋಗಿಗಳಿಗೆ ಆಂಬುಲೆನ್ಸ್ ಸೇವೆ ಸಿಗದಕ್ಕೆ ಸಂಕಷ್ಟವಾಗುತ್ತಿದೆ.

ಸುರಪುರ ತಾಲೂಕಾ ಆರೋಗ್ಯಧಿಕಾರಿ ಡಾ. ಆರ್.ವಿ. ನಾಯಕ ಮಾತನಾಡಿ, ಸುರಪುರ ತಹಶಿಲ್ದಾರ ಅವರು ಆಸ್ಪತ್ರೆಗೆ ದಾಖಲಾಗಿರುವುದರಿಂದ ಇಂಧನದ ಹಣ ಪಾವತಿ ಮಾಡಲು ಸಾಧ್ಯವಾಗಿಲ್ಲ.

ಈ ಸಮಸ್ಯೆ ಬೇಗ ಪರಿಹರಿಸಿ ಆಂಬುಲೆನ್ಸ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದರು. ಸರಕಾರ ಕೋವಿಡ್ ತಡೆಗೆ ಕೋಟ್ಯಂತರ ರೂ ಹಣ ಖರ್ಚು ಮಾಡುತ್ತದೆ. ಆದರೆ, ಹಣ ಪಾವತಿ ಮಾಡಲು ವಿಳಂಬ ಮಾಡದೆ ಕೂಡಲೇ ಹಣ ಪಾವತಿ ಮಾಡಿ ರೋಗಿಗಳಿಗೆ ಆ್ಯಂಬುಲೆನ್ಸ್ ಸೇವೆ ಕಲ್ಪಿಸಬೇಕಾಗಿದೆ.

Related