`ಕರ್ತಾರ್ ಪುರ್ ಸಾಹಿಬ್’ ಭೇಟಿಗೆ ಪಾಕ್ ಅನುಮತಿ

`ಕರ್ತಾರ್ ಪುರ್ ಸಾಹಿಬ್’ ಭೇಟಿಗೆ ಪಾಕ್ ಅನುಮತಿ

ನವದೆಹಲಿ : ಕೋವಿಡ್-19 ಲಸಿಕೆ ಪಡೆದ ಯಾತ್ರಿಕರಿಗೆ ಗುರುನಾನಕ್ ದೇವ್ ಅವರ ಪುಣ್ಯತಿಥಿಗಾಗಿ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾರ್ ಪುರಕ್ಕೆ ಭೇಟಿ ನೀಡಲು ಅವಕಾಶ ನೀಡುವುದಾಗಿ ಪಾಕಿಸ್ತಾನ ಸರ್ಕಾರ ಭಾನುವಾರ ಘೋಷಿಸಿದೆ.
ಪಾಕಿಸ್ತಾನದ ರಾಷ್ಟ್ರೀಯ ಕಮಾಂಡ್ ಮತ್ತು ಕಾರ್ಯಾಚರಣೆ ಕೇಂದ್ರ (ಎನ್ ಸಿಒಸಿ) ಸಭೆ ನಡೆಸಿದ್ದು, ಲಸಿಕೆ ಪಡೆದ ಪ್ರಮಾಣಪತ್ರಗಳೊಂದಿಗೆ ಯಾತ್ರಿಕರಿಗೆ ಮುಂದಿನ ತಿಂಗಳು ಕಟ್ಟುನಿಟ್ಟಾದ, ಶಿಷ್ಟಾಚಾರಗಳ ಅಡಿಯಲ್ಲಿ ನರೋವಾಲ್ ಜಿಲ್ಲೆಯ ಕರ್ತಾರ್ ಪುರಕ್ಕೆ ಭೇಟಿ ನೀಡಲು ಅನುಮತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
ವಿಮಾನ ನಿಲ್ದಾಣಗಳಲ್ಲಿ ಕ್ಷಿಪ್ರ ಆಂಟಿಜೆನ್ ಟೆಸ್ಟ್ (ಆರ್ ಎಟಿ) ಸಹ ನಡೆಸಲಾಗುತ್ತದೆ, ಕೊರೊನಾ ಪಾಸಿಟಿವ್ ಬಂದ ವ್ಯಕ್ತಿಗಳನ್ನು ಪಾಕಿಸ್ತಾನ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

Related