ಭವನ ಡೇಮಾಲೀಷ್‌ಗೆ ವಿರೋಧ

ಭವನ ಡೇಮಾಲೀಷ್‌ಗೆ ವಿರೋಧ

ದೇವದುರ್ಗ :- ಪಟ್ಟಣದಲ್ಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದ ಕಾರ್ಯಾಲಯ ಹತ್ತು ಹನ್ನೊಂದು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಭವನವನ್ನು ಡೇಮಾಲೀಷ್ ಮಾಡಲು ಮುಂದಾಗಿರುವ ಅಧಿಕಾರಿಗಳು, ಸಾರ್ವಜನಿಕರ ಹಿತದೃಷ್ಟಿಯಿಂದ ಕಾರ್ಯನಿರತ ಪತ್ರಕರ್ತರ ಸಂಘ ವಿರೋಧಿಸುತ್ತದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಸನಗೌಡ ದೇಸಾಯಿ ಹೇಳಿದರು.
ಪತ್ರಿಕಾ ಭವನ ಕಾರ್ಯಾಲಯದಲ್ಲಿ ಭಾನುವಾರ ನಡೆದ ಪತ್ರಿಕೆಯ ದಿನಾಚರಣೆಯ ಸಭೆಯಲ್ಲಿ ಮಾತನಾಡಿ, ಅವಶ್ಯಕತೆ ಎನಿಸಿದರೆ ಪ್ರತ್ಯೇಕವಾಗಿ ಜಾಗ ಮತ್ತು ಕಟ್ಟಡವನ್ನು ನಿರ್ಮಾಣ ಮಾಡಿ, ನಂತರ ಕಾರ್ಯಾಲಯವನ್ನು ಬಿಟ್ಟು ಕೊಡುತ್ತೇವೆ, ಕಟ್ಟಡವನ್ನು ಒಡೆದು ಹಾಕುವ ಬದಲು ಸಾರ್ವಜನಿಕರ ಹಣವನ್ನು ವ್ಯರ್ಥ ಮಾಡದೆ ಬಳಸಿಕೊಳ್ಳುವ ಕೆಲಸವನ್ನು ಅಧಿಕಾರಿಗಳು ಮಾಡಬೇಕೆಂದು ಪತ್ರಕರ್ತರ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಸಂಘವು ಕಾರ್ಯನಿರ್ವಹಿಸಿತ್ತಿದ್ದು, ನಮ್ಮ ನಿಲುವನ್ನು ಮೀರಿ ಅಧಿಕಾರಿಗಳು ನಡೆದುಕೊಂಡರೆ ಕಾನೂನಿನ ಹೋರಾಟದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ನರಸಿಂಗರಾವ್ ಸರ್ಕಿಲ್, ಮೈನುದ್ದೀನ್ ಕಾಟಮಳಿ, ಜಿಲ್ಲಾ ಉಪಾಧ್ಯಕ್ಷ ಸೂಗೂರೇಶ ಗುಡಿ , ತಾಲೂಕು ಉಪಾಧ್ಯಕ್ಷ ಮಾರ್ಕಂಡೇಯ ನಾಡದಾಳು, ಬೆಳ್ಳಿಯಪ್ಪ ಬಲ್ಲಿದವ್, ಪ್ರದಾನ ಕಾರ್ಯದರ್ಶಿ ಬಾಬು ಕರಿಗುಡ್ಡ, ಗೀರಿಯಪ್ಪ ಪೂಜಾರಿ, ನಾಗರಾಜ ಸುಟ್ಟಿ, ನಾಗರಾಜ ತೇಲ್ಕರ, ಬಾಬು ಅಲಿ ಜಾಲಹಳ್ಳಿ, ಶರಣಗೌಡ ಎಸ್,ಗುರುಸ್ವಾಮಿ ಅರಕೇರಾ,ರಂಗನಾಥ ಕೊಂಬಿನ್, ಗುರು ಇಂಗಳದಾಳು, ಅಮರೇಶ ಚಿಲ್ಕರಾಗಿ, ಆನಂದ ಗುಡಿ, ವಿರುಪಾಕ್ಷಿ, ನಿರಂಜನ ಮಸರಕಲ್, ಶಿವರಾಜ್ ಪರಾಪುರ, ಮಾಹಾತೇಶ ಹೀರೆಮಠ, ಬಂದೆನವಾಜ್,ಯಮನೂರಪ್ಪ ,ಮಹಾಲಿಂಗ , ಹಸೇನಸಾಬ್ ಅಂಜಳ, ಸುರೇಶಗೌಡ, ರಾಮಣ್ಣನಾಯಕ ಮತ್ತಿತರರಿದ್ದರು.

Related