ಅನಧಿಕೃತ ಅಂಗಡಿಗಳನ್ನು ತೆರೆವುಗೊಳಿಸಿ

  • In State
  • September 3, 2021
  • 565 Views
ಅನಧಿಕೃತ ಅಂಗಡಿಗಳನ್ನು ತೆರೆವುಗೊಳಿಸಿ

ಹಟ್ಟಿಚಿನ್ನದಗಣಿ: ಕಳೆದ 30 ವರ್ಷಗಳಿಂದ ಹಳೆ ಬಸ್ ನಿಲ್ದಾಣದ ಹತ್ತಿರ ರೋಮನ್ ಕ್ಯಾಥೋಲಿಕ್ ಚರ್ಚ್ ಎದುರುಗಡೆ ಇರುವ ಖಾಲಿ ಜಾಗದಲ್ಲಿ ಸುಮಾರು 10 ವಾಹನಗಳು ಪಾರ್ಕಿಂಗ್ ಮಾಡುತ್ತಿದ್ದು, ಜಾಗದಲ್ಲಿ ಅನಧಿಕೃತವಾಗಿ ಅಂಗಡಿಗಳು ಇಟ್ಟು, ಪಾರ್ಕಿಂಗ್ ಮಾಡುವುದಕ್ಕೆ ಅಂಗಡಿ ಮಾಲೀಕರು ತೊಂದರೆ ನೀಡುತ್ತಾರೆ ಎಂದು ಟ್ಯಾಕ್ಸಿ ಚಾಲಕರ ಮಜ್ದೂರ್ ಸಂಘದಿಂದ ಹಟ್ಟಿ ಪೊಲೀಸ್ ಠಾಣೆಗೆ, ಪಟ್ಟಣ ಪಂಚಾಯಿತಿ ಶುಕ್ರವಾರ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಪುಟ್‌ಪಾತ್ ಜಾಗ ಪಂಚಾಯಿತಿಗೆ ಸೇರಿದ್ದು ಕಳೆದ ಒಂದು ವರ್ಷಗಳಿಂದ ಟ್ಯಾಕ್ಸಿ ಚಾಲಕರಿಗೆ, ಸಾರ್ವಜನಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಚಾಲಕರಿಗೆ ಸಾರ್ವಜನಿಕರಿಗೆ ವಾಹನ ನಿಲ್ಲಿಸುವುದಕ್ಕೆ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾದ ರಾಜುಗೌಡ ಗುರಿಕಾರ್, ಮೈಬೂಬ್ ಪಾಶಾ. ಹನುಮಂತ. ಕೋಮಲ್ ಯಲ್ಲಪ್ಪ ಗೌಡಪ್ಪ ಇತರರಿದ್ದರು.

Related