ಜೈ ಶ್ರೀರಾಮ್ ಎಂದು ಕೂಗಲು ಯಾರ ಅಪ್ಪಣೆ ಬೇಕಿಲ್ಲ: ಅಶ್ವತ್ಥ ನಾರಾಯಣ

ಜೈ ಶ್ರೀರಾಮ್ ಎಂದು ಕೂಗಲು ಯಾರ ಅಪ್ಪಣೆ ಬೇಕಿಲ್ಲ: ಅಶ್ವತ್ಥ ನಾರಾಯಣ

ಬೆಂಗಳೂರು: ನಮ್ಮ ಇಡೀ ದೇಶದಲ್ಲಿ ಹಿಂದೂಗಳ ಆರಾಧ್ಯ ದೈವವೆಂದರೆ ಅದು ರಾಮ. ಜೈ ಶ್ರೀರಾಮ್ ಎಂದು ಕೂಗಲು ರಾಜ್ಯದಲ್ಲಿ ಯಾರ ಅನುಮತಿಯು ಪಡೆಯಬೇಕಿಲ್ಲವೆಂದು ಮಾಜಿ ಸಚಿವ ಅಶ್ವತ್ ನಾರಾಯಣ್ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಅವರ ಹಾಕಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಈಗಾಗಲೇ ಸ್ವತಂತ್ರ ದೇಶವಾಗಿದೆ ಹಾಗಾಗಿ ಜೈ ಶ್ರೀರಾಮ್ ಎಂದು ಕೂಗಲು ಯಾರ ಅಪ್ಪಣೆ ಅಥವಾ ಪರ್ಮಿಷನ್ ಪಡೆಯ ಬೇಕಾಗಿಲ್ಲ ಎಂದು ಹೇಳಿದರು.

ಇದು ಭಾರತ. ನಮಗೆ ಶ್ರೀರಾಮ ಆದರ್ಶ. ಜೈಶ್ರೀರಾಮ್ ಎಂದು ಕೂಗೇ ಕೂಗುತ್ತೇವೆ. ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಅಲ್ಲಾ ಎಂದು ಮಾತ್ರ ಹೇಳಿ, ಶ್ರೀರಾಮ್ ಹೇಳಬೇಡಿ ಅಂದರೆ ಏನಿದು..? ಇಂಥವರಿಗೆಲ್ಲ ಕಾಂಗ್ರೆಸ್ ಪ್ರಚೋದನೆ ಇದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿಂದಲೂ ತುಷ್ಟೀಕರಣ ರಾಜಕಾರಣ, ಅದರ ಬಿಸಿ, ಅದರ ಪ್ರಭಾವ ನಿತ್ಯ ಕಾಣುತ್ತಿದೆ. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ಎಂದು ದೂರಿದರು.

 

Related