ಅಧಿಕಾರಿಗಳೇ ಗ್ರಾಪಂ ಪರಿಸ್ಥಿತಿಯನ್ನೊಮ್ಮೆ ನೋಡಿ

ಅಧಿಕಾರಿಗಳೇ ಗ್ರಾಪಂ ಪರಿಸ್ಥಿತಿಯನ್ನೊಮ್ಮೆ ನೋಡಿ

ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯ್ತಿ ಹಲವು ಬಾರಿ ಉತ್ತಮ ಗ್ರಾಮ ಪಂಚಾಯ್ತಿ ಎಂಬ ಪ್ರಶಸ್ತಿಗೆ ಭಾಜನವಾಗಿದೆ. ಆದರೆ ಇಲ್ಲಿ ಸ್ಥಳೀಯರು ಹೇಳುವ ಕತೆಯೇ ಬೇರೆ.

ಸ್ಥಳೀಯವಾಗಿ ಮುಖ್ಯ ರಸ್ತೆ ಬಿಟ್ಟರೆ ಯಾವ ಒಂದು ರಸ್ತೆ, ಚರಂಡಿ ಹಾಗೂ ಕಸ ವಿಲೇವಾರಿಗೆ ಕಸದ ತೊಟ್ಟಿಗಳನ್ನಿಟ್ಟಿಲ್ಲ. ಇದರಿಂದ ಎಲ್ಲೆಂದರಲ್ಲಿ ಕಸದ ರಾಶಿ ಬೀಳುತ್ತಿದೆ. ಅಲ್ಲದೇ ಕಸದ ತೊಟ್ಟಿಗೆ ಆಗಿದ್ದ ಬಿಲ್ ಕೂಡ ನುಂಗಿ ನೀರು ಕುಡಿದಿದ್ದಾರೆ. ಇಲ್ಲಿ ಯಾವ ಒಂದು ಓಣಿಯಲ್ಲೂ ಕಸದ ತೊಟ್ಟಿ ಕಾಣುತ್ತಿಲ್ಲ ಎಂಬುದು ಸ್ಥಳೀಯರ ಆರೋಪ ಆಗಿದೆ.

ಸುತ್ತಮುತ್ತಲಿನ ಮನೆಯವರಿಗೆ ಡೆಂಗ್ಯೂ, ಚಿಕನ್‌ಗುನ್ಯಾ ಹಾಗೂ ಮಲೇರಿಯಾ ರೋಗದಿಂದ ಬಳಲುತ್ತಿದ್ದು, ಈ ಕೊಳಚೆ ವಾಸನೆ ತಡೆದುಕೊಂಡು ಬದುಕುತ್ತಿರುವುದು ನಿವಾಸಿಗಳ ಅನಿವಾರ್ಯ ಪರಿಸ್ಥಿತಿ ಆಗಿದೆ ಹಲವು ಬಾರಿ ಕಾಲೊನಿಯ ನಿವಾಸಿಗಳು ಗ್ರಾ0, ಪಚಾಯ್ತಿಗೆ ಮನವಿ ಸಲ್ಲಿಸಿದರು.

ಯಾವೊಬ್ಬ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಯಾಗಲಿ ಹಾಗೂ ಗ್ರಾಮಾಭಿರುದ್ದಿ ಅಧಿಕಾರಿ (ಪಿಡಿಒ) ಆಗಲಿ ಇತ್ತಕಡೆ ಗಮನಿಸಿಲ್ಲ ವಿಷಯ ಗೊತ್ತಿದ್ದೂ, ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಕೂಡಲೇ ಸಂಬAಧಿಸಿದ ಅಧಿಕಾರಿಗಳು ಇತ್ತಕಡೆ ಗಮನಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Related