ಮತ್ತೇ ಕೋರ್ಟ್ ಮೆಟ್ಟಿಲೇರಿದ ನುಪೂರ್ ಶರ್ಮಾ..!

  • In Crime
  • July 19, 2022
  • 259 Views
ಮತ್ತೇ ಕೋರ್ಟ್ ಮೆಟ್ಟಿಲೇರಿದ ನುಪೂರ್ ಶರ್ಮಾ..!

ನವದೆಹಲಿ, ಜುಲೈ 18 : ಬಿಜೆಪಿಯಿಂದ ಅಮಾನತುಗೊಂಡಿರುವ ನಾಯಕಿ ನೂಪುರ್ ಶರ್ಮಾ ಅವರು ತಮಗೆ ಅತ್ಯಾಚಾರ, ಕೊಲೆ ಯಂತಹ ಜೀವ ಬೆದರಿಕೆ ಕರೆಗಳು ಹೆಚ್ಚಾಗಿವೆ. ಜೀವಕ್ಕಿದ್ದ ಅಪಾಯ ಮತ್ತಷ್ಟು ಹೆಚ್ಚಾಗಿದೆ ಎಂದು ಸೋಮವಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಪ್ರವಾದಿ ಮೊಹಮ್ಮದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ. ಅವರ ಬೇಡಿಕೆ ತಿರಸ್ಕರಿ ಕೋರ್ಟ್ ಕಟುವಾಗಿ ಟೀಕಿಸಿತ್ತು. ನೂಪುರ್ ಶರ್ಮಾ ನಾಲಿಗೆ ಹರಿಬಿಟ್ಟಿದ್ದರಿಂದಲೇ ದೇಶಕ್ಕೆ ಬೆಂಕಿ ಹತ್ತಿದೆ ಎಂದಿತ್ತು. ಇದಾದ ಬಳಿಕ ನೂಪುರ್ ಶರ್ಮಾ ಅರ್ಜಿ ಹಿಂಪಡೆದಿದ್ದರು.

Related