ಅಧಿಕಾರಿಗಳಿಗೆ ಸೂಚನೆ

ಅಧಿಕಾರಿಗಳಿಗೆ ಸೂಚನೆ

ಕಮಲನಗರ :ಪಟ್ಟಣ ಸೇರಿದಂತೆ ಠಾಣಾಕುಶನುರ ಗ್ರಾಮಗಳಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆಯಾ ಆರ್ಭಟಕ್ಕೆ ವಿವಿಧ ಅವಾಂತರ ಸೃಷ್ಟಿಯಾಗಿದೆ. ಉದ್ದು, ಹೆಸರು, ಕಟಾವು ಮಾಡಿದ ಬಣವೆಗೆ ನೀರು ನುಗ್ಗಿ ಹಾನಿಗೊಂಡಿದ. ಸ್ಥಳಕ್ಕೆ ಭೇಟಿ ನೀಡಿ ಬೆಳೆಯನ್ನು ವೀಕ್ಷಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸರ್ವೆ ಮಾಡಿ ವರದಿ ಸಲ್ಲಿಸಲು ಸಚಿವ ಪ್ರಭು ಚೌವ್ಹಾಣ್ ಸೂಚನೆ ನೀಡಿದರು.
ಕೃಷಿ ಹಂಗಾಮಿ ಆರಂಭದಿಂದಲೂ ಅತಿವೃಷ್ಟಿ, ಅನಾವೃಷ್ಟಿ, ದಿನನಿತ್ಯ ಕಾಡು ಪ್ರಾಣಿ ಕಾಟ, ರೈತರು ಕಷ್ಟಗಳು ಎದುರಿಸಿದರು. ಇದೀಗ ಸುರಿದ ಮೆಳೆಗೆ ಕಟಾವುಗೆ ಬಂದ ಉದ್ದು, ಹೆಸರು, ಬೆಳೆ ನಾಶವಾಗಿದೆ.
ಕೊರೋನಾ ಸಂಕಷ್ಟದಲ್ಲಿದ್ದು, ಮುಂಗಾರು ಬೆಳೆಗಳನ್ನು ಆಶ್ರಯಿಸಿದ್ದ, ಅತಿವೃಷ್ಟಿಯ ಪರಿಣಾಮ ಬೆಳೆ ಕೈಕೂಡುವ ವೇಳೆಗೆ ಆತಂಕ ಮಾಡಿದೆ. ಹಾನಿಯಾದ ಗ್ರಾಮ ಸೋನಾಳ, ಕಾಲಗಾಪೂರ, ಡಿಗ್ಗಿ, ಬಾಲೂರ, ಮುರುಗ, ತೋರಣಾ, ಹೋಳಸಮುದ್ರ ಭೇಟಿ ನೀಡಿ ಬೆಳೆಯನ್ನು ಸಂಪೂರ್ಣ ಹಾಳಾಗಿದ್ದು, ಕಮಲನಗರ ವಲಯದಲ್ಲಿ ದಾಖಲೆ ಮಳೆ ಸುರಿದ ಹಿನ್ನೆಲೆ ಒಟ್ಟು 200 ಹೇಟ್ಕರ್ ಬೆಳೆ ನಾಶವಾಗಿದೆ ಎಂದು ಮಾಹಿತಿ ಕಲೆ ಹಾಕಿದರು.
ಈ ಸಂದಂರ್ಭದಲ್ಲಿ ಕಮಲನಗರ ತಹಸೀಲ್ದಾರ ರಮೇಶ ಪೆದ್ದೆ, ಸಹಾಯಕ ಕೃಷಿ ನಿರ್ದೇಶಕ ಇಂದಿರಾ, ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಪ್ರಕಾಶ ಟೋಣ್ಣೆ, ಕಮಲನಗರ ಗ್ರಾಪಂ ಅಧ್ಯಕ್ಷ ಶಿವಕುಮಾರ ಝುಲ್ಪೆ, ಸುಭಾಷ ಗಾಯಕವಾಡ, ಭರತ ಕದಮ, ಗೋಪಾಳರಾವ ಪಾಟೀಲ್, ರಾಹುಲ ಪಾಟೀಲ್, ಸುರೇಶ ಭೋಸ್ಲೆ ಗ್ರಾಮದ ಮುಖಂಡರು ಇದ್ದರು.

Related