ವೈದ್ಯರಿಗಿಲ್ಲ ವೇತನ

ವೈದ್ಯರಿಗಿಲ್ಲ ವೇತನ

ಸವದತ್ತಿ: ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲ. ಸೇವೆ ಮತ್ತು ವೇತನದಲ್ಲಿ ತಾರತಮ್ಯವಾಗುತ್ತಿದೆ ಎಂದು ಆಯುಷ್ ಫೆಡರೇಶನ್ ಆಫ್ ಇಂಡಿಯಾ ವೈದ್ಯಕೀಯ ಸಂಘ ಮುಖಂಡ ಡಾ. ಆರ್ ಆರ್ ಹಿರೆಕುಂಬಿ ದೂರಿದರು.

ಆಯುಷ್ ಫೆಡರೇಶನ್ ಆಫ್ ಇಂಡಿಯಾ ವೈದ್ಯಕೀಯ ಸಂಘ ಸವದತ್ತಿವತಿಯಿಂದ ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದ ಅವರು, ವೇತನ ಹೆಚ್ಚಳ ಮತ್ತು ಸೇವಾಭದ್ರತೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ನೀಡಿದ್ದೇವೆ. ಆರೋಗ್ಯ ಸಚಿವರು ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾ ವೈದ್ಯಕೀಯ ಸಂಘ ಸವದತ್ತಿ ಪದಾಧಿಕಾರಿಗಳಾದ ಡಾ. ಜಿ ಎಲ್ ಮೇಟಿ. ಡಾ.ಬಿ ಎಮ್ ಪಕ್ಕಿರಶೆಟ್ಟಿ. ಡಾ ಎಸ್ ಎಲ ಕುಲಕರ್ಣಿ ಡಾ ರವಿ ಹನಸಿ . ಡಾ ಎಸ್ ಎಮ್ ಪಾಟೀಲ. ಡಾ ಉದಯ ಹುರಳಿ.ಡಾ ಕೃಷ್ಣಾ ಹನಸಿ. ಢಾ ವಿಜಯಾ ಕೋಳಕಿ ಡಾ.ಶಶೀಕಲಾ ತಡಕೋಡ. ಡಾ ಗೀತಾ ಉಪಸ್ಥಿತರಿದ್ದರು

Related