ತೆರೆಮೇಲೆ ಕಾಣಲು ನಿಖಿಲ್ ಕುಮಾರ್ ಅಭಿಮಾನಿಗಳ ಕಾತರ

ತೆರೆಮೇಲೆ ಕಾಣಲು ನಿಖಿಲ್ ಕುಮಾರ್ ಅಭಿಮಾನಿಗಳ ಕಾತರ

ನಟ ನಿಖಿಲ್ ಕುಮಾರಸ್ವಾಮಿ ಮದುವೆಯಾದ ಮೇಲಂತೂ ಫುಲ್ ಬ್ಯುಸಿಯಾಗಿದ್ದಾರೆ. ಪತ್ನಿ ರೇವತಿ ಜೊತೆ ಫಾರ್ಮ್ ಹೌಸ್ ಕಟ್ಟೊದ್ರಲ್ಲಿ ನಿರತರಾಗಿದ್ದಾರೆ. ಆದ್ರೆ ಇಷ್ಟು ದಿನ ನಿಖಿಲ್ ಮುಂದಿನ ಸಿನಿಮಾಗಳ ಬಗ್ಗೆ ಯಾವುದೇ ಅಪ್ಡೇಟ್ಸ್ ಇರಲಿಲ್ಲ. ಜಾಗ್ವಾರ್, ಸೀತಾರಾಮ ಕಲ್ಯಾಣ, ಕುರುಕ್ಷೇತ್ರ ಬಳಿಕ ಮತ್ಯಾವ ಸಿನಿಮಾನೂ ರಿಲೀಸ್ ಆಗಿರಲಿಲ್ಲ. ಇದರ ನಡುವೆ ನಿಖಿಲ್ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿ ಒಂದು ಸಿನಿಮಾ ಒಪ್ಪಿಕೊಂಡಿದ್ರು.

ಈ ಸಿನಿಮಾವನ್ನು ಲಹರಿ ಸಂಸ್ಥೆ ನಿರ್ಮಾಣ ಮಾಡ್ತಿದ್ದು, ಅದ್ಧೂರಿಯಾಗಿ ಮುಹೂರ್ತವೂ ನಡೆದಿತ್ತು. ಇದೀಗ ಸದ್ದಿಲ್ಲದೇ ಚಿತ್ರತಂಡ 60% ನಷ್ಟು ಶೂಟಿಂಗ್ ಮುಗಿಸಿದೆ. ಕೊರೊನಾ ಎಫೆಕ್ಟ್ ಇದ್ದಿದ್ರಿಂದ ನಾಲ್ಕೈದು ತಿಂಗಳಿನಿAದ ಯಾವುದೇ ಶೂಟಿಂಗ್ ನಡೆದಿರಲಿಲ್ಲ. ಸೆಪ್ಟೆಂಬರ್ ಮೊದಲ ವಾರದಲ್ಲಿ ಆಲ್‌ಮೋಸ್ಟ್ ಎಲ್ಲಾ ಬಿಗ್ ಸ್ಟಾರ್‌ಗಳ ಸಿನಿಮಾಗಳು ಟೇಕಾಫ್ ಆಗುವ ಸಾಧ್ಯತೆ ಇದೆ.

ಇನ್ನೂ ಕೊರೊನಾ ಎಫೆಕ್ಟ್ ಇರೋದ್ರಿಂದ, ಅಕ್ಟೋಬರ್ ಬಳಿಕ ಶೂಟಿಂಗ್ ಮಾಡೋಕೆ ನಿರ್ಮಾಪಕ ಲಹರಿ ವೇಲು ನಿರ್ಧರಿಸಿದ್ದಾರೆ. ಈ ಸಿನಿಮಾ ಪಕ್ಕಾ ಎಂಟರ್ಟೈನರ್ ಆಗಿದ್ದು, ಮನೆ ಮಂದಿ ಎಲ್ಲಾ ಕೂತು ನೋಡಬಹುದು ಅಂತಾ ಲಹರಿ ವೇಲು ತಿಳಿಸಿದ್ದಾರೆ.

Related