ಕಮಲನಗರ ಶಾಲೆಗೆ ಮತ್ತೆ ಹೊಸ ಚೇತನ

  • In State
  • September 6, 2021
  • 567 Views
ಕಮಲನಗರ ಶಾಲೆಗೆ ಮತ್ತೆ ಹೊಸ ಚೇತನ

ಕಮಲನಗರ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಳೆಗಾಂವನಲ್ಲಿ ಅತ್ಯಂತ ವೈಭವಯುತವಾಗಿ ಮಕ್ಕಳಿಗೆ ಸೋಮವಾರ ಅದ್ದೂರಿ ಸ್ವಾಗತಿಸಿ ಶಾಲಾ ಪ್ರಾರಂಭೋತ್ಸವನ್ನು ಆಚರಿಸಿದರು. ಈ ವೇಳೆ ಮುಖ್ಯ ಗುರುಗಳು, ಸಿಬ್ಬಂದಿ ವರ್ಗದವರು ಶಾಲಾ ಉಸ್ತುವಾರಿ ಸಮಿತಿ ಸದಸ್ಯರು, ಅಡುಗೆ ಸಿಬ್ಬಂದಿ ಗ್ರಾಮದ ಮುಖಂಡರು ಮಕ್ಕಳಿಗೆ ಗುಲಾಬಿ ಹೂವು ನೀಡುವುದರ ಮೂಲಕ ಪುಷ್ಪವೃಷ್ಟಿ ಮಾಡಿ, ಅತ್ಯಂತ ಹೃದಯಸ್ಪರ್ಶಿಯಾಗಿ ಶಾಲೆ ಅಲಂಕರಿಸಿ ಮಕ್ಕಳಿಗೆ ಹೊಸಚೇತನ ತುಂಬಿಸಿದರು.
ಈ ವೇಳೆ ಗ್ರಾ. ಪಂ. ಪ್ರತಿನಿಧಿಗಳು ಮಕ್ಕಳಿಗೆ ಉಚಿತವಾಗಿ ಮಾಸ್ಕ್ ವಿತರಿಸುವುದರ ಮೂಲಕ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಾಬುರಾವ್ ದೇಶಮುಖ ಅವರು ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸರಕಾರವು 6 ರಿಂದ 8ನೇ ತರಗತಿಗಳನ್ನು ಭೌತಿಕವಾಗಿ ಪ್ರಾರಂಭಿಸಿರುವುದು ಅತ್ಯಂತ ಸಂತೋಷದ ಸಂಗತಿ. ಮಕ್ಕಳು 18 ತಿಂಗಳ ನಂತರ ಶಾಲೆಯ ಮುಖ ನೋಡುವ ಭಾಗ್ಯ ಸಿಕ್ಕಿದೆ. ಆದರೆ ಎಲ್ಲರೂ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಚಾಚುತಪ್ಪದೆ ಪಾಲಿಸಬೇಕು ಎಂದು ಹೇಳಿದರು.

ವಲಯದ ಸಿ.ಆರ್.ಪಿ ಶಿವಕುಮಾರ್ ಹೊನ್ನಾಳೆ ಮಾತನಾಡಿ, ಸರಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಬೇಕು. ಮಕ್ಕಳಿಗೆ ಮಾಸ್ಕ್ ಸ್ಯಾನಿಟ್ಯೆಸರ್ ಬಳಸಬೇಕು. ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು ಶನಿವಾರ, ಭಾನುವಾರ ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟ್ಯೆಸರ್ ಮಾಡಿಸಿ, ಮಕ್ಕಳ ಉಷ್ಣತೆಯನ್ನು ಪರೀಕ್ಷಿಸಿರಿ. ಪ್ರತಿಯೊಬ್ಬರೂ ಮಕ್ಕಳ ಕಾಳಜಿಯನ್ನು ವಹಿಸಬೇಕು. ನಾವು ನಿಮ್ಮ ಜೊತೆಯಲ್ಲಿ ಇದ್ದೆವೆ, ಯಾವುದೇ ಆತಂಕವಿಲ್ಲದೆ ಶಾಲೆಗೆ ಬರಬೇಕೆಂದು ಮಕ್ಕಳಲ್ಲಿ ಮನವಿ ಮಾಡಿದರು.
ಗ್ರಾಮದ ಮುಖಂಡ ಸತೀಶ್ ದೇಶಮುಖ, ಅಶೋಕ ದೇಶಮುಖ, ಮುಖ್ಯಗುರು ಸಂಜೀವ ಗೋಖಲೆ, ಸಿಬ್ಬಂದಿಗಳಾದ ಕಸ್ತೂರಿಬಾಯಿ, ಅಂಬಿಕಾ ಮುಲಗೆ, ಬಸವರಾಜ ಅವಟೆ ಇನ್ನಿತರರಿದ್ದರು.

Related