ಶಿಲ್ಪಾ ಮನೆಗೆ ಹೊಸ ಅತಿಥಿ ಎಂಟ್ರಿ

ಶಿಲ್ಪಾ ಮನೆಗೆ ಹೊಸ ಅತಿಥಿ ಎಂಟ್ರಿ

ಮುಂಬೈ, ಫೆ. 21 : ಖ್ಯಾತ ಬಾಲಿವುಡ್ ತಾರೆ, ಮಂಗಳೂರು ಮೂಲದ ನಟಿ ಶಿಲ್ಪಾ ಶೆಟ್ಟಿ,ರಾಜ್ ಕುಂದ್ರಾ ದಂಪತಿಗಳು ತಮ್ಮ ಮನೆಗೆ ನೂತನ ಅತಿಥಿಯನ್ನು ಸ್ವಾಗತಿಸಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಜನ್ಮಿಸಿದ ಹೆಣ್ಣು ಮಗುವಿಗೆ ತಾವು ಪೋಷಕರಾಗಿದ್ದೇವೆ ಎಂದು ನಟ ಶಿಲ್ಪಾ ಶೆಟ್ಟಿಕುಂದ್ರಾ ದಂಪತಿಗಳು ಶುಕ್ರವಾರ ಪ್ರಕಟಿಸಿದ್ದಾರೆ. ಫೆಬ್ರವರಿ 15 ರಂದು ಈ ದಂಪತಿಗಳು ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು.
“ನಮ್ಮ ಪ್ರಾರ್ಥನೆಗೆ ಫಲ ಸಿಕ್ಕಿದೆ. ಪವಾಡದ ಮೂಲಕ ಉತ್ತರವಾಗಿ . ನಮ್ಮ ಪುಟ್ಟ ಏಂಜಲ್ ಆಗಮನವನ್ನು ಘೋಷಿಸಲು ನಮ್ಮ ಹೃದಯ ತುಂಬಿ ಬರುತ್ತಿದೆ. ಸಮಿಶಾ ಶೆಟ್ಟಿ ಕುಂದ್ರಾ. ಫೆಬ್ರವರಿ 15, 2020 ರಂದು
ಶಿಲ್ಪಾ ಪ್ರಿಯದರ್ಶನ್ ಅವರ “ಹಂಗಮಾ 2” ಚಿತ್ರದಲ್ಲಿ ಪರೇಶ್ ರಾವಲ್, ಮೀಜನ್ ಜಾಫೆರಿ ಮತ್ತು ದಕ್ಷಿಣ ಭಾರತ ನಟಿ ಪ್ರಣಿತಾ ಸುಭಾಷ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ

Related