ಹಂಪೆಗೆ ಹೊಸ ಹೊಳಪು

ಹಂಪೆಗೆ ಹೊಸ ಹೊಳಪು

ಬಳ್ಳಾರಿ : ವಿಶ್ವ ಪ್ರಸಿದ್ಧಹಂಪಿಗೆ ಪ್ರವಾಸಿಗರು ಸ್ಮಾರಕ ವೀಕ್ಷಣೆ ಇಂದಿನಿಂದ  ಪ್ರವಾಸಿಗರಿಗೆ ಅವಕಾಶ ದೊರೆಯಲಿದ್ದು, ಮೂರು ತಿಂಗಳಿಂದ ಪ್ರವಾಸಿಗರನ್ನೇ ಕಾಣದೆ ಬಿಕೋ ಎನ್ನುತ್ತಿದ್ದ ಸ್ಮಾರಕಗಳಿಗೆ ಕಳೆಬಂದಂತಾಗಿದೆ.

ಕೊರೊನಾ ನಿಂದಾಗಿ ಮೂರು ತಿಂಗಳಿನಿಂದ  ಹಂಪಿ ಸ್ಮಾರಕ ವೀಕ್ಷಿಸಲು ಪ್ರವಾಸಿಗರಿಗೆ ನಿರಾಸೆಯಾಗಿತ್ತು. ಇಂದಿನಿಂದ  ಪ್ರವಾಸಿಗರು ಹಂಪಿ ಸ್ಮಾರಕ ವೀಕ್ಷಣೆ ಮಾಡಬಹುದಾಗಿದೆ.

ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಇತ್ತೀಚೆಗೆ ಅನುಕೂಲ ಕಲ್ಪಿಸಿತ್ತು. ಆದರೆ, ವಿಶ್ವ ಪಾರಂಪರಿಕ ತಾಣವಾದ ಹಂಪಿ ವೀಕ್ಷಿಸಲು ಅವಕಾಶವಿರಲಿಲ್ಲ. ಇದೀಗ ಹಂಪಿಯ ಸ್ಮಾರಕ ವೀಕ್ಷಿಸಲು ಜಿಲ್ಲಾಡಳಿತ ಕ್ಲಿಯರನ್ಸ್ ನೀಡಿದ ಹಿನ್ನಲೆ ಭಾರತೀಯ ಪುರಾತತ್ವ ಇಲಾಖೆ ಅನುಮತಿ ನೀಡಿದೆ.  ಹಂಪಿ  ಲಾಕ್ ಡೌನ್ ನಿಂದ ಮುಕ್ತಿ ಪಡೆದಂತಾಗಿದೆ.

Related