ಕ್ರೀಡಾಂಗಣಕ್ಕೆ ನೀರಜ್ ಛೋಪ್ರಾ ಹೆಸರು

  • In Sports
  • August 21, 2021
  • 407 Views
ಕ್ರೀಡಾಂಗಣಕ್ಕೆ ನೀರಜ್ ಛೋಪ್ರಾ ಹೆಸರು

ಪುಣೆ: ಪುಣೆಯಲ್ಲಿ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ಆವರಣದಲ್ಲಿರುವ ಕ್ರೀಡಾಂಗಣಕ್ಕೆ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹೆಸರಿಡಲಾಗಿದೆ.
ಪುಣೆ ಕಂಟೋನ್ಮೆಂಟ್‍ನಲ್ಲಿರುವ ಈ ಕ್ರೀಡಾಂಗಣವನ್ನು ನೀರಜ್ ಚೋಪ್ರಾ ಆರ್ಮಿ ಸ್ಪೋರ್ಟ್ಸ್ ಸ್ಟೇಡಿಯಂ ಎಂದು ಹೆಸರಿಸಲಾಗಿದೆ. ಕ್ರೀಡಾಂಗಣದ ಅಧಿಕೃತ ನಾಮಕರಣ ಸಮಾರಂಭವನ್ನು ಆ.23 ಕ್ಕೆ ನಿಗದಿಪಡಿಸಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದನ್ನು ನೆರವೇರಿಸಲಿದ್ದಾರೆ. ಸಿಂಗ್ ಅವರ ಜೊತೆ ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರ್ವಾನೆ ಮತ್ತು ಲೆಫ್ಟಿನೆಂಟ್ ಗವರ್ನರ್ ಜೆಎಸ್ ನೈನ್ ಇರಲಿದ್ದಾರೆ.
ನೀರಜ್ ಅವರ ಐತಿಹಾಸಿಕ ಗೋಲ್ಡನ್ ಥ್ರೋ ಅನ್ನು ವಿಶ್ವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಅಥ್ಲೆಟಿಕ್ಸ್ ನ (ಟ್ರ‍್ಯಾಕ್ ಮತ್ತು ಫೀಲ್ಡ್) 10 ಮಾಂತ್ರಿಕ ಕ್ಷಣಗಳಲ್ಲಿ ಒಂದಾಗಿ ಪಟ್ಟಿ ಮಾಡಲಾಗಿದೆ.
ಭಾರತ ಸರ್ಕಾರ, ಕ್ರೀಡಾ ಸಚಿವಾಲಯ, ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಭಾರತೀಯ ಸೇನೆಯು ವಾಪಸಾದ ನಂತರ ಅವರನ್ನು ಗೌರವಿಸಲಾಗಿದೆ.

Related