ರಾಷ್ಟ್ರೀಯ ನೇತ್ರದಾನ, ಅಂಗಾಂಗ ದಾನ ಶಿಬಿರ

ರಾಷ್ಟ್ರೀಯ ನೇತ್ರದಾನ, ಅಂಗಾಂಗ ದಾನ ಶಿಬಿರ

ಶಹಾಪುರ : ಒಬ್ಬ ವ್ಯಕ್ತಿಯು ದಾನ ಮಾಡಿದ ನೇತ್ರಗಳು ಇಬ್ಬರು ಕಣ್ಣಿನ ತೊಂದರೆಯ ಅಂಧರ ಬಾಳಿಗೆ ಬೆಳಕು ನೀಡಬಹುದಾಗಿದ್ದು, ಪ್ರತಿ ಕುಟುಂಬವು ನೇತ್ರದಾನ ಮಾಡುವುದು ಸಂಪ್ರದಾಯವಾಗಿ ರೂಢಿಯಾಗಲಿ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ ಗುರುವಾರ ಕರೆ ನೀಡಿದರು.

ತಾಲೂಕಿನ ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆರೋಗ್ಯ ಸಂಘ(ಅಂಧತ್ವ ನಿವಾರಣ ವಿಭಾಗ) ಸಹಯೋಗದಲ್ಲಿ ಏರ್ಪಡಿಸಲಾದ ರಾಷ್ಟ್ರೀಯ ನೇತ್ರದಾನ 36ನೇ ಪಾಕ್ಷಿಕ ಹಾಗೂ ಅಂಗಾಂಗ ದಾನ ಜಾಗೃತಿ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರಾಸರಿ 5600 ನೇತ್ರದಾನಗಳಾಗುತ್ತಿವೆ. ಅಂದಾಜು 1.25ಲಕ್ಷ ಜನರು ಕಾರ್ನಿಯಾ ಸಂಬಂಧಿ ಅಂಧತ್ವದಿಂದ ಬಳಲುತ್ತಿದ್ದು ದಾನಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದಲ್ಲಿ 7 ಸರಕಾರಿ ಸ್ವಾಮ್ಯ ಸೇರಿದಂತೆ 32ನೇತ್ರ ಬ್ಯಾಂಕ್‍ಗಳು ಸೇವೆ ಸಲ್ಲಿಸುತ್ತಿದ್ದು ಯಾರಾದರೂ ವಯಸ್ಸು, ಲಿಂಗ, ಜಾತಿ ರಕ್ತದ ಗುಂಪು ಯಾವುದೇ ಭೇದಭಾವವಿಲ್ಲದೆ ಪ್ರತಿಯೊಬ್ಬರು ನೇತ್ರದಾನ ಮಾಡಬಹುದಾಗಿದೆ ಎಂದು ತಿಳಿಸಿದರು.

ಈ ವೇಳೆ ನೇತ್ರತಜ್ಞ ಡಾ.ಜಗದೀಶ ಉಪ್ಪಿನ, ಆರೋಗ್ಯಾಧಿಕಾರಿ ಡಾ.ಶಮೀನಾ ಬೇಗಂ, ಡಾ.ಶ್ವೇತಾ ಜಾಕಾ, ಡಾ.ಸುರೇಖಾ, ಡಾ.ಮೈತ್ರಿ ಶಿವಪ್ರಸಾದ, ಡಾ.ವೆಂಕಟೇಶ ಬೈರಾವಡಗಿ, ಡಾ.ಯಲ್ಲಪ್ಪ, ಪ್ರದೀಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related