20 ಭಾಷೆಗಳಲ್ಲಿ ಮೋದಿ ಜೀವನ ಚರಿತ್ರೆ

20 ಭಾಷೆಗಳಲ್ಲಿ ಮೋದಿ ಜೀವನ ಚರಿತ್ರೆ

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ‘ನರೇಂದ್ರ ಮೋದಿ- ಹರ್ಬಿಂಜರ್‌ ಆಫ್ ಪ್ರಾಸ್ಪರಿಟಿ ಆ್ಯಂಡ್‌ ಅಪೋಸ್ಟಲ್‌ ಆಫ್ ವರ್ಲ್ಡ್ ಪೀಸ್‌’ ಎಂಬ ಜೀವನ ಚರಿತ್ರೆ ಕೃತಿಯನ್ನು ನಿವೃತ್ತ ನ್ಯಾ| ಕೆ.ಜಿ. ಬಾಲಕೃಷ್ಣನ್‌ ಶನಿವಾರ ಬಿಡುಗಡೆ ಮಾಡಿದ್ದಾರೆ.

ಮೋದಿ ಸರ್ಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದು 6 ವರ್ಷ ಭರ್ತಿಯಾದ ನೆನಪಿಗೆ ಡಾ| ಅದೀಶ್‌ ಸಿ. ಅಗರ್ವಾಲ್‌ ಮತ್ತು ಎಲಿಜಬೆತ್‌ ಹೊರಾನ್‌ ಈ ಕೃತಿಯನ್ನು ರಚಿಸಿದ್ದಾರೆ.

ಮೋದಿ ಅವರ ಬಾಲ್ಯದ ಅಪರೂಪದ ಚಿತ್ರಗಳ ಪೇಂಟಿಂಗ್‌ ಮತ್ತು ಬದುಕಿನ ಕೌತುಕ ಘಟನೆಗಳನ್ನು ಪುಸ್ತಕ ಒಳಗೊಂಡಿದೆ.

ಪುಸ್ತಕವು ಹಾರ್ಡ್‌ ಕವರ್‌ ಮತ್ತು ಇ-ಬುಕ್‌ ಆವೃತ್ತಿಗಳಲ್ಲಿ ಲಭ್ಯವಿದ್ದು, 20 ಭಾಷೆಗಳಿಗೆ ಅನುವಾದಗೊಂಡಿದೆ. ಹಿಂದಿ, ಕನ್ನಡ, ಅಸ್ಸಾಮಿ, ಬಂಗಾಲಿ, ಗುಜರಾತಿ, ಮರಾಠಿ, ಪಂಜಾಬಿ, ತಮಿಳು, ತೆಲುಗು ಹಾಗೂ ಉರ್ದು ಭಾಷೆಗಳಲ್ಲಿ ಪ್ರಕಟಗೊಳ್ಳುತ್ತಿದೆ. ಒಟ್ಟು 10 ವಿದೇಶಿ ಭಾಷೆಗಳಿಗೆ ಇದು ತರ್ಜುಮೆಗೊಂಡಿದೆ.

Related