ನಿರ್ದೇಶಕನ ಮನೆಯಲ್ಲಿ ನಾಮಕರಣ ಸಂಭ್ರಮ

ನಿರ್ದೇಶಕನ ಮನೆಯಲ್ಲಿ ನಾಮಕರಣ ಸಂಭ್ರಮ

ಬೆಂಗಳೂರು : ಇಂದು ನಿರ್ದೇಶಕ ಪವನ್ ಒಡೆಯರ್ ಹಾಗೂ ಅಪೇಕ್ಷಾ ದಂಪತಿಗೆ ಗಂಡು ಮಗು ಹುಟ್ಟಿದ್ದು, ಇದೀಗ ತಮ್ಮ ಮುದ್ದು ಮಗುವಿಗೆ ನಾಮಕರಣ ಶಾಸ್ತ್ರ ನೆರವೇರಿಸಿದರು.

ನಿರ್ದೇಶಕ ಪವನ್ ಒಡೆಯರ್, ತಮ್ಮ ಮಗನ ನಾಕರಣದ ಸಂದರ್ಭದ ಫೋಟೋ ಹಾಗೂ ಇನ್ನಿತರ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ಅಂದ ಹಾಗೇ ಪವನ್ ಹಾಗೂ ಅಪೇಕ್ಷಾ ದಂಪತಿ ತಮ್ಮ ಮುದ್ದು ಮಗನಿಗೆ ಶೌರ್ಯ ಎಂದು ಹೆಸರಿಟ್ಟಿದ್ದಾರೆ.

ಒಡೆಯರ್ ಹುಟ್ಟುಹಬ್ಬದ ದಿನದಂದೇ ಡಿ. 10 ರಂದು ಪತ್ನಿ ಅಪೇಕ್ಷಾಗೆ ಗಂಡು ಮಗು ಜನಿಸಿದ್ದು, ಈ ಸಂತಸದ ವಿಚಾರ ಪವನ್ ಒಡೆಯರ್ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊAಡಿದ್ದರು.

Related