ಬಿಬಿಎಂಪಿಯಲ್ಲಿ ಭಾರೀ ಗೋಲ್ಮಾಲ್

ಬಿಬಿಎಂಪಿಯಲ್ಲಿ ಭಾರೀ ಗೋಲ್ಮಾಲ್

ಬೆಂಗಳೂರು, ಫೆ. 13 : ಪ್ರಾಮಾಣಿಕವಾಗಿ ಕೆಲಸ ಮಾಡಿದ ಗುತ್ತಿಗೆದಾರನಿಗೆ ಪಂಗಮನಾಮ ಹಾಕಿರುವ ಪ್ರಕರಣ ಬಿಬಿಎಂಪಿಯಲ್ಲಿ ಬೆಳಕಿ ಬಂದಿದೆ. ಬಿಬಿಎಂಪಿಯಲ್ಲಿ ಸತ್ತವರು ಬದುಕಬಹುದು, ಬದುಕಿರುವವರು ಸಾಯ ಬಹುದು, ಮನೆಗಳೇ ಅದಲು- ಬದಲಾಗಬಹುದು, ರಸ್ತೆಗಳೇ ಮನೆಗಳಾಗ ಬಹುದು. ಹಗರಣಗಳ ಸಾಲಿಗೆ ಮತ್ತೊಂದು ಸೇರ್ಪಡೆ. ಗುತ್ತಿಗೆ ನಿರ್ವಹಣೆಯ ಹಣವನ್ನೇ ನಕಲಿ ವ್ಯಕ್ತಿಗಳು ಲಪಟಾಯಿಸಿ ಪ್ರಾಮಾಣಿಕವಾಗಿ ಕೆಲಸ ಮಾಡಿದ ಗುತ್ತಿಗೆದಾರನಿಗೆ ಪಂಗಮನಾಮ ಹಾಕಿರುವ ಪ್ರಕರಣ ಬಿಬಿಎಂಪಿಯಲ್ಲಿ ನಡೆದಿದೆ.
ಸರ್ವಜ್ಞ ನಗರದ ನಿವಾಸಿ ಚಂದ್ರಪ್ಪ ಎಂಬ ಗುತ್ತಿಗೆದಾರರು ಬಿಬಿಎಂಪಿಯಿಂದ 4 ಕೋಟಿ ರೂ. ಕಾಮಗಾರಿ ಗುತ್ತಿಗೆ ಪಡೆದು ಕೆಲಸ ನಿರ್ವಹಿಸಿದರು. ಬಿಬಿಎಂಪಿಯಲ್ಲಿ ಗುತ್ತಿಗೆ ಬಿಲ್ ಪಾವತಿಯಾಗಲು ಸಾಕಷ್ಟು ಸಮಯ ಹಿಡಿಯಲಿದೆ.

Related