ನನ್ನ ಹೆಸರಿಗೂ ವಿರೋಧ ಇದೆ ಡಿಕೆ ಸುರೇಶ್​​​!

ನನ್ನ ಹೆಸರಿಗೂ ವಿರೋಧ ಇದೆ ಡಿಕೆ ಸುರೇಶ್​​​!

ಬೆಂಗಳೂರು: ಮುಂಬರುವ 2024ನೇ ಸಾಲಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿದೆ ಎಂದು ರಾಜ ರಾಜಕೀಯದಲ್ಲಿ ಈಗಾಗಲೇ ಗುಸು-ಗುಸು ಮಾತು ಶುರುವಾಗಿದೆ.

ಹೌದು, ವಿಧಾನ ಪರಿಷತ್​​ಗೆ ಸಮಾಜ ಸೇವೆಯಿಂದ ಸುಧಾಮ್ ದಾಸ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲರಿಗೆ ಶಿಫಾಸರಸ್ಸು ಮಾಡಿದ ಬೆನ್ನಲ್ಲೇ ಪಕ್ಷದೊಳಗೆಯೇ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಸಂಸದ ಡಿಕೆ ಸುರೇಶ್ ಮಾತನಾಡಿ ನನ್ನ ಹೆಸರಿಗೂ ವಿರೋಧ ಇದೆಯಪ್ಪ. ಎಲ್ಲವನ್ನು ಹೈಕಮಾಂಡ್, ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು. ಈ ಮೂಲಕ ಬರುವ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಲ್ಲೇ ವಿರೋಧ ವ್ಯಕ್ತವಾಗುತ್ತಿದೆಯಾ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ.

ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರರು ಎರಡೂವರೆ ವರ್ಷದಿಂದ ಬಿಲ್ ಪೆಂಡಿಂಗ್ ಇದೆ ಅಂದಿದ್ದಾರೆ. ಕೆಲಸ ಮಾಡಿದವರಿಗೆ ಹಣ ಸಿಗುತ್ತದೆ ಎಂದು ಸರ್ಕಾರವೇ ಸ್ಪಷ್ಟಪಡಿಸಿದೆ. ಕಳಪೆ ಕಾಮಗಾರಿಗೆ 40% ಕಮಿಷನ್ ಕಾರಣ ಎಂಬ ಆರೋಪಗಳಿತ್ತು. ಹೀಗಾಗಿ ತನಿಖೆ ಮಾಡಿ ಹಣ ಬಿಡುಗಡೆ ಮಾಡುವುದಾಗಿ ಸಿಎಂ ಡಿಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.

 

Related