ಪ್ರೇಯಸಿ ಕೊಲೆ ; ಆರೋಪಿ ಬಂಧನ

ಪ್ರೇಯಸಿ ಕೊಲೆ ; ಆರೋಪಿ ಬಂಧನ

ಏಳು ಜನ್ಮ ಒಟ್ಟಿಗೆ ಇರುತ್ತೇನೆಂದು ಪ್ರಮಾಣ ಮಾಡಿ ಮದುವೆಯಾದ ಪತಿಯೇ ಜೀವನ ಸಂಗಾತಿ ಜೀವ ತೆಗೆದಿದ್ದಾನೆ. ಅಮಾನುಷವಾಗಿ ಪತ್ನಿ ಜೀವ ತೆಗೆದ ಪತಿ ನಂತ್ರ ಪೊಲೀಸ್ ಮುಂದೆ ಶರಣಾಗಿದ್ದಾನೆ. ಇಬ್ಬರ ಮದುವೆಯಾಗಿ ಕೇವಲ 3 ತಿಂಗಳು ಅಷ್ಟೇ ಆಗಿತ್ತು.

ಇಬ್ಬರು ಒಂದೇ ಕಚೇರಿಯಲ್ಲಿ ಕೆಲಸ ಮಾಡ್ತಿದ್ದರಂತೆ. ಸ್ನೇಹ ಬೆಳೆದು ಪ್ರೀತಿಗೆ ತಿರುಗಿದೆ. ಆರೋಪಿ ಹರ್ಷ್ ಒಳ್ಳೆಯವನಲ್ಲವೆಂದು ಕುಟುಂಬಸ್ಥರು ಹೇಳಿದ್ದರಂತೆ. ಆದ್ರೆ ಇದನ್ನು ಕೇಳದ ಹುಡುಗಿ ಹರ್ಷ್ ಮನೆಯಲ್ಲಿ ವಾಸ ಮಾಡಿದ್ದಳು.

ಮೂರು ತಿಂಗಳ ಹಿಂದೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮಂಗಳವಾರ ರಾತ್ರಿ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಕೋಪಗೊಂಡ ಹರ್ಷ್, ನಾಯಿ ಸರಪಳಿಯಿಂದ ಪತ್ನಿ ಕತ್ತು ಬಿಗಿದಿದ್ದಾನೆ. ನಂತ್ರ ಚಾಕುವಿನಿಂದ ಇರಿದಿದ್ದಾನೆ. ಅಲ್ಲಿಯೇ ಪತ್ನಿ ಕೊನೆಯುಸಿರೆಳೆದಿದ್ದಾಳೆ. ಗಲಾಟೆ ಏನಾಗಿತ್ತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Related