ಗೆಲುವಿತ್ತ ಹೆಜ್ಜೆ ಹಾಕಿದ ಮುನಿರತ್ನ

ಗೆಲುವಿತ್ತ ಹೆಜ್ಜೆ ಹಾಕಿದ ಮುನಿರತ್ನ

ಬೆಂಗಳೂರು : ಆರ್.ಆರ್ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು, 9ನೇ ಸುತ್ತಿನ ಮತ ಎಣಿಕೆಯಲ್ಲಿ 25 ಸಾವಿರ ಮತಗಳ ಅಂತರ ಕಾಯ್ದುಕೊಂಡಿದ್ದಾರೆ.

ಆರ್.ಆರ್.ನಗರದಲ್ಲಿ ಮುನಿರತ್ನ 50.387 ಮಗಳನ್ನು ಪಡೆದು, 25.143 ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಈ ಮೂಲಕ ಆರ್.ಆರ್ ನಗರದಲ್ಲಿ ಮುನಿರತ್ನ ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ ಎನ್ನಲಾಗುತ್ತಿದೆ.

ಮುನಿರತ್ನ ಬಹುದೊಡ್ಡ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಳ್ಳುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಮುನಿರತ್ನಗೆ ಜಯ ಘೋಷಗಳನ್ನು ಹಾಕುತ್ತಿದ್ದಾರೆ.

Related