ರಾಂಚಿ: ಲಾಕ್‍ಡೌನ್ ವೇಳೆ ಸೆಲೆಬ್ರೆಟಿಗಳು ಯಾವ ರೀತಿ ಕಾಲ ಕಳೆಯುತ್ತಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಪ್ರಶ್ನೆ. ಕೆಲವರು ಅವರ ಅಪ್ಪ-ಅಮ್ಮನ ಜೊತೆ ಇದ್ದರೆ, ಇನ್ನು ಕೆಲವರು ಅಡುಗೆ ಮನೆಯಲ್ಲಿ ರುಚಿ ರುಚಿಯಾದ ಅಡುಗೆ ಮಾಡಿ ಟೈಂ ಪಾಸ್ ಮಾಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಮುದ್ದು ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ.
ಇಲ್ಲಿ ಕ್ರಿಕೆಟ್ ಸೆಲೆಬ್ರಿಟಿ ಹಾಗೂ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಮಗಳು ಝೀವಾಳೊಂದಿಗೆ ಆಟ ಆಡುತ್ತಾ ತಾವು ಮಗುವಂತೆ ಆಗಿದ್ದಾರೆ.
ರಾಂಚಿಯಲ್ಲಿರುವ ಫಾರ್ಮ್ ಹೌಸ್‍ನಲ್ಲಿ ಮಗಳೊಂದಿಗೆ ರನ್ನಿಂಗ್ ಮಾಡುತ್ತಿರುವ ವಿಡಿಯೋವನ್ನು #runninglife post sunset ! ಎಂಬ ಅಡಿಬರಹದಡಿ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು 4 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ಅಲ್ಲದೇ ಈ ವಿಡಿಯೋದಲ್ಲಿ ಧೋನಿ ಸ್ವಲ್ಪ ವಯಸ್ಸಾದವರಂತೆ ಕಾಣುತ್ತಿದ್ದು, ಧೋನಿಯವರ ಮುಂದಿನ ನಡೆ ಏನು? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.