ವ್ಯಾಪಾರಿಗಳಿಗೆ ಸಂಸದ ಅಭಿನಂದನೆ

ವ್ಯಾಪಾರಿಗಳಿಗೆ ಸಂಸದ ಅಭಿನಂದನೆ

ಚಿಕ್ಕೋಡಿ :  ಬಿಜೆಪಿ ಕಛೇರಿಯಲ್ಲಿ ಸಣ್ಣ ಬೀದಿ ವ್ಯಾಪಾರಗಳಿಗೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಮುಂತಾದವರು ಅಭಿನಂದನಾ ಪತ್ರ ವಿತರಿಸಿದರು.

ಚಿಕ್ಕೋಡಿ ಬಿಜೆಪಿ ಕಛೇರಿಯಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಭಿನಂದನಾ ಪತ್ರ ವಿತರಿಸಿ ಮಾತನಾಡಿ ಬೀದಿ ವ್ಯಾಪಾರಿಗಳಿಗೆ ಕೊರೋನಾ ಮಹಾಮಾರಿ ಸಂದರ್ಭದಲ್ಲಿ ತಮಗೆ ವ್ಯಾಪಾರ ಆಗದೇ ಮನೆಯಲ್ಲಿದ್ದು ನಷ್ಟ ಅನುಭವಿಸಿದ್ದಿರಿ.

ಕಾರಣಕ್ಕೆ ತಾವು ಬೀದಿ ಬೀದಿ ಅಲೆದಾಡಿ ಸಣ್ಣ ಪುಟ್ಟ ವ್ಯಾಪಾರ ಮಾಡುತ್ತಿದ್ದು, ತಾವು ಮಾಡುತ್ತಿರುವ ಸಣ್ಣ ಪುಟ್ಟ ವ್ಯಾಪಾರಗಳು ಇನ್ನಷ್ಟು ಅಭಿವೃದ್ಧಿ ಹೊಂದಲು ಚಿಕ್ಕೋಡಿ ಮತಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಪ್ರಯತ್ನದಿಂದ 280 ಜನರಿಗೆ ತಲಾ 10,000 ರೂ.ಗಳನ್ನು ತಮಗೆ ಒದಗಿಸಿ ಕೊಟ್ಟಿದ್ದೆನೆ. ಆದ್ದರಿಂದ ತಾವು ನೀಡಿದ ಬ್ಯಾಂಕ್ ಖಾತೆಗೆ ಅನುದಾನದ ಹಣ ಜಮಾ ಆಗಿದ್ದು, ಇ ಅನುದಾನವನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಿಕೊಂಡು ತಮ್ಮ ವ್ಯಾಪಾರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿಕೊಳ್ಳಿ ಎಂದು ಹೇಳಿದರು.

Related